ಶನಿವಾರ, ಜನವರಿ 26, 2019

70ನೇ ಗಣರಾಜ್ಯೋತ್ಸವ

70ನೇ ಗಣರಾಜ್ಯೋತ್ಸವ

ಅರಸೀಕೆರೆ ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ "70 ನೇ ಗಣರಾಜ್ಯೋತ್ಸವ" ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ತಾಲ್ಲೂಕು ದಂಡಾಧಿಕಾರಿಗಳಾದ ಎನ್.ವಿ.ನಟೇಶ್ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ತೆರದ ಜೀಪಿನಲ್ಲಿ ಕವಾಯತು ವೀಕ್ಷಣೆ ಮಾಡಿದರು.  ಅರಸೀಕೆರೆ ನಗರ ಠಾಣೆಯ ಎ.ಎಸ್.ಐ ತಿಮ್ಮಪ್ಪನವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು, ಎನ್.ಸಿ.ಸಿ, ಸ್ಕೌಟ್ಸ್, ಗೌಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಶಕ ಪಥಸಂಚಲನೆ ನಡೆಸಿದರು.

ಗೌರವ ವಂದನೆ ಸ್ವೀಕರಿಸಿದ ನಂತರ ತಹಶೀಲ್ದಾರರು ಸಭೆಯನ್ನುದ್ದೇಶಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.  ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಕಳೆದ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ತೃತೀಯ ಸ್ಥಾನವನ್ನು ಪಡೆದು, ರಾಷ್ಟ್ರೀಯ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ, ಅರಸೀಕೆರೆ ತಾಲ್ಲೂಕಿಗೆ ಕೀರ್ತಿ ತಂದ ನಗರದ ಸಂತ ಮರಿಯ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಕೆ.ಸಿ.ಪ್ರಿಯಂವದ ರವರನ್ನು ಸನ್ಮಾನಿಸಲಾಯಿತು.

ಅರಸೀಕೆರೆಯ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕರಾದ ಶೇಖರಪ್ಪ ರವರ ಪುತ್ರ  ಸಿ.ಎಸ್. ಶಿವಕುಮಾರ್ ರವರು ಭಾರತದ ವಾಯುಸೇನೆಯ ಪೈಲೆಟ್ ಆಗಿ ಆಯ್ಕೆಯಾಗಿದ್ದು, ದೇಶಸೇವೆಗೆ ಸೇರ್ಪಡೆಯಾದ ಶಿವಕುಮಾರ್.ಸಿ.ಎಸ್ ರವರ ಪರವಾಗಿ ಅವರ ತಂದೆ ತಾಯಿಯವರನ್ನು ಸನ್ಮಾನಿಸಲಾಯಿತು.

ಅರಸೀಕೆರೆ ನಗರದಲ್ಲಿ ವಾಸವಿರುವ ಕೃಷಿ ಇಲಾಖೆಯ ನಿವೃತ್ತ ಅಧೀಕ್ಷಕರು ಹಾಗೂ ಪ್ರಗತಿಪರ ಕೃಷಿಕರು ಮತ್ತು ಸಮಾಜ ಸೇವಕರು ಆಗಿರುವ ಹಿರಿಯ ನಾಗರೀಕರಾದ ಶ್ರೀ ಪಿ.ಬಿ.ಶಾಂತಪ್ಪ ರವನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಸೀಕೆರೆ ಶಾಸಕರಾದ ಶ್ರೀ ಕೆ.ಎಂ.ಶಿವಲಿಂಗೇಗೌಡರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಅರಸೀಕೆರೆ ನಗರದ ವಿವಿಧ ಶಾಲೆಯ ಮಕ್ಕಳುಗಳಿಂದ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಜನರ ಮನಸೂರೆಗೊಂಡಿತು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿ.ಪಂ ಸದಸ್ಯರುಗಳು, ನಗರಸಭೆಯ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

(ಚಿತ್ರಗಳು  : ಶ್ರೀರಾಮ ಜಮದಗ್ನಿ)






































































Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....