ಸೋಮವಾರ, ನವೆಂಬರ್ 19, 2018

ಅರಸೀಕೆರೆ ಬಳಿ ರಸ್ತೆ ಅಪಘಾತ - ಸ್ಥಳದಲ್ಲೇ ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ರಂಗಾಪುರ ಕಾವಲ್ ಮುರಾರ್ಜಿ ವಸತಿ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಂದು (ಸೋಮವಾರ) ರಾತ್ರಿ ಸುಮಾರು 8.30 ರ ಸಮಯದಲ್ಲಿ ಮಾರುತಿ ಒಮಿನಿ ಹಾಗೂ ಬೊಲೆರೋ ಮಿನಿ ಗೂಡ್ಸ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾರುತಿ ಒಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಿವೆ.

ಅರಸೀಕೆರೆಯಿಂದ ಬೆಂಗಳೂರಿಗೆ ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ ಬೊಲೆರೋ ವಾಹನ ಹಾಗೂ ಬೆಂಗಳೂರಿನ ದೇವನಹಳ್ಳಿಯಿಂದ ಸಿಂಗಂಧೂರಿಗೆ ಪ್ರಯಾಣಿಸುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.   ಮಹೇಶ ಮತ್ತು ಮಧು ಎಂಬ ಹೆಸರಿನ ಸುಮಾರು 25-30 ವರ್ಷದ ಯುವಕರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ)




Share:

ಶನಿವಾರ, ನವೆಂಬರ್ 10, 2018

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ 77 ನೇ ವರ್ಷದ ವಿಸರ್ಜನಾ ಮಹೋತ್ಸವವು ಅದ್ದೂರಿಯಿಂದ ಆಚರಿಸಲ್ಪಟ್ಟಿತು. 

ನೆನ್ನೆ ಸಂಜೆ ಪ್ರಾರಂಭಗೊಂಡಿದ್ದ ಶ್ರೀಯವರ ಉತ್ಸವವು ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಸಂಜೆ 8 ಗಂಟೆಯ ಸಮಯಕ್ಕೆ ಕಂತೇನಹಳ್ಳಿ ಕೆರೆಯ ಬಳಿ ಆಗಮಿಸಿತು. ಕಂತೇನಹಳ್ಳಿ ನಿವಾಸಿಗಳು ಶ್ರೀಯವರಿಗೆ ಪೂಜೆ ಸಲ್ಲಿಸಿದ ನಂತರ, ಕೆರಯಂಗಳದಲ್ಲಿ ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ ಮಾಲೀಕರಾದ ಶ್ರೀ ಎ.ಆರ್.ಶಂಕರಾಚಾರ್ ರವರಿಂದ ಚಿತ್ತಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.  ನಂತರ ಶ್ರೀಯವರನ್ನು ಕ್ರೇನ್ ಮೂಲಕ ಕಂತೆನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಅರಸೀಕೆರೆ ಪೊಲೀಸ್ ಡಿ.ವೈ.ಎಸ್.ಪಿ ಶ್ರೀ ಸದಾನಂದ ತಿಪ್ಪಣ್ಣವರ ರವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.








Share:

ಶುಕ್ರವಾರ, ನವೆಂಬರ್ 9, 2018

ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ

ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ

ಅರಸೀಕೆರೆ ಶಾಸಕರಾದ ಶ್ರೀ ಕೆ.ಎಂ.ಶಿವಲಿಂಗೇಗೌಡರು ಶ್ರೀ ಪ್ರಸನ್ನ ಗಣಪತಿಯವರ ವಿಗ್ರಹವನ್ನು ಸಾಂಕೇತಿಕವಾಗಿ ಜರುಗಿಸುವ ಮೂಲಕ ಎರಡು ದಿನಗಳ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನೂರಾರು ಭಕ್ತರು ಈ ಕಾರ್ಯಕ್ಕೆ ಸಹಕರಿಸಿದರು.

ನಂತರ, ವಾಚನಾಲಯ ರಸ್ತೆಯಲ್ಲಿ ಅರಸೀಕೆರೆ ಶಾಸಕ ಶ್ರೀ. ಕೆ.ಎಂ. ಶಿವಲಿಂಗೇಗೌಡ ಹಾಗೂ ವಿವಿಧ ಸಮಾಜದ ಮುಖಂಡರುಗಳು ಈಡುಗಾಯಿ ಸೇವೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಸಮಾಜ, ಸಂಸ್ಥೆಗಳಿಂದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ರಾತ್ರಿ, ಹಾಸನ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಗಣಪತಿ ಉತ್ಸವ ಆಗಮಿಸಿದ ವೇಳೆ, ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ್ ಮಾಲೀಕರಾದ ಎ.ಆರ್.ಶಂಕರಾಚಾರ್ ರವರಿಂದ ಬಣ್ಣಬಣ್ಣದ ಚಿತ್ತಾಕರ್ಶಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು




















Share:

ಗುರುವಾರ, ನವೆಂಬರ್ 8, 2018

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಅರಸೀಕೆರೆ

"ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಅರಸೀಕೆರೆ"


ನಾಳೆ (09-11-2018) ಶುಕ್ರವಾರ ಜರುಗಲಿರುವ ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವಕ್ಕೆ ಅರಸೀಕೆರೆ ನಗರವು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ.
ನಗರದ ಬಿ.ಹೆಚ್ ರಸ್ತೆಯಲ್ಲಿ ಎಪಿಎಂಸಿ ಗೇಟಿನ ಮುಂಭಾಗದಿಂದ ಕಂತೇನಹಳ್ಳಿ ಕೆರೆಯ ವರೆಗೂ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ದೀಪಾವಳಿಯ ಈ ಸಂದರ್ಭದಲ್ಲಿ, ಅರಸೀಕೆರೆ ನಗರವು ಅಕ್ಷರಶಃ ದೀಪಗಳಿಂದ ಕಂಗೊಳಿಸುತ್ತಿದೆ.
ಶ್ರೀ ಪ್ರಸನ್ನ ಗಣಪತಿಯವರ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯ ದಿನವಾದ ಇಂದು ಸಂಜೆ ಶ್ರೀಮತಿ ಮಾಲಿನಿ ರವರಿಂದ ಹರಿಕಥೆಯನ್ನು ಏರ್ಪಡಿಸಲಾಗಿತ್ತು.
10-11-2018, ಶನಿವಾರದಂದು ರಾತ್ರಿ ಅರಸೀಕೆರೆ ಕಂತೇನಹಳ್ಳಿ ಕೆರೆಯಲ್ಲಿ ಶ್ರೀಯವರನ್ನು ವಿಸರ್ಜಿಸಲಾಗುವುದು.







Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....