ಚಿತ್ರಾವಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿತ್ರಾವಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 16, 2017

ಅರಸೀಕೆರೆಯಲ್ಲಿ ಮುಂಜಾನೆಯ ಮಂಜು



ಅರಸೀಕೆರೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ದಟ್ಟವಾದ ಮಂಜು ಕವಿದು ನೋಡಲು ಮಲೆನಾಡಿನಂತೆ ಕಾಣುತ್ತಿತ್ತು.  ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮಂಜು ನೋಡನೋಡುತ್ತಿದ್ದಂತೆ ದಟ್ಟವಾಗತೊಡಗಿತು.   8 ಗಂಟೆಯ ಹೊತ್ತಿಗೆ ಮಂಜು ಸಂಪೂರ್ಣ ಕರಗಿಹೋಯಿತು.







Share:

ಶುಕ್ರವಾರ, ಏಪ್ರಿಲ್ 21, 2017

ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ

Arsikere : 

ಅರಸೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ.  ಬೆಳಗ್ಗೆ 11 ಗಂಟೆಯ ನಂತರ ಹೊರಗೆ ಓಡಾಡಲೂ ಕಷ್ಟವಾಗುವಷ್ಟು ಬಿಸಿಲಿನ ಝಳ ಮುಖಕ್ಕೆ ರಾಚುತ್ತಿದೆ.   ಈ ಬಿಸಿಲ ಝಳ ಪ್ರಾಣಿ ಪಕ್ಷಿಗಳನ್ನೂ ಹೈರಾಣಾಗುವಂತೆ ಮಾಡಿದೆ.  ಇಂದು ಮಧ್ಯಾನ್ಹ  ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ನಗರಸಭೆಯ ನೀರು ಸರಬರಾಜು ಕಚೇರಿಯ ಮುಂಭಾಗದಲ್ಲಿ, ಖಾಸಗಿ ಮಠಕ್ಕೆ ಸೇರಿದ ಹೆಣ್ಣಾನೆಯೊಂದು ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಸಾರ್ವಜನಿಕರ ಉಪಯೋಗಕ್ಕೆ ಅಳವಡಿಸಿರುವ ನಲ್ಲಿ ನೀರನ್ನು ಮೈಮೇಲೆ ಸುರಿದುಕೊಂಡಿತು.  ಪಟ್ಟಣಗಳಲ್ಲೇ ಸಾಕುಪ್ರಾಣಿಗಳಿಗೆ ಈ ಪರಿಸ್ಥಿತಿಯಾಗಿರುವಾಗ, ಇನ್ನು ಈ ಬೇಸಿಗೆಯ ಬರದಲ್ಲಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು.
ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ

ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ


ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ


Share:

ಮಂಗಳವಾರ, ಏಪ್ರಿಲ್ 18, 2017

ಅರಸೀಕೆರೆ ಹಾಸನ ರಸ್ತೆ ಪ್ರಯಾಣಿಕರಿಗೆ ಶುಭಸುದ್ದಿ

ಅರಸೀಕೆರೆ ಪಟ್ಟಣದ ಹಾಸನ ರಸ್ತೆಯಲ್ಲಿ ಓಡಾಡುವವರಿಗೆ ಆಗಾಗ ಒಂದು ಸಮಸ್ಯೆ ಕಾಡುತ್ತಿರುತ್ತದೆ.  ಅದೇನೆಂದರೆ, ರೈಲು ಸೇತುವೆ ಕೆಳಗೆ ಓಡಾಡುವಾಗ ಯಾವುದಾದರೂ ಪ್ರಯಾಣಿಕರ ರೈಲು ಸಂಚಾರವಿದ್ದರೆ ಅನಿವಾರ್ಯವಾಗಿ ನಿಂತುಕೊಳ್ಳಬೇಕಾಗಿರುತ್ತಿತ್ತು…. ಕಾರಣ ಏನೆಂದು ನಿಮಗೆ ಗೊತ್ತಾಗಿರಬಹುದು, ವಿವರಿಸಬೇಕಾದ ಅವಶ್ಯಕತೆ ಇಲ್ಲ ಅಲ್ವಾ….

ಆದರೀಗ ಈ ಸಮಸ್ಯೆಗೆ ಮುಕ್ತಿ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ.  ಹಾಸನ ರಸ್ತೆಯ ರೈಲ್ವೆ ಮೇಲ್ಸೇತುವೆಯ ಕೆಳಭಾಗದಲ್ಲಿ ತಗಡುಗಳನ್ನು ಅಳವಡಿಸುವ ಕಾರ್ಯ ಪ್ರಾರಂಭಗೊಂಡಿದೆ.  ಒಂದೆರಡು ದಿನಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ.  ಇನ್ನುಮುಂದೆ ಈ ಸೇತುವೆಯ ಮೇಲೆ ಯಾವುದೇ ರೈಲುಗಳು ಸಂಚರಿಸುತ್ತಿದ್ದರೂ, ಕೆಳಗೆ ನಿರಾಳವಾಗಿ ಓಡಾಡಬಹುದು.

Arsikere Hassan  Road Railway Underpass


Share:

ಭಾನುವಾರ, ಮಾರ್ಚ್ 19, 2017

ಅರಸೀಕೆರೆಯ ಕೆರೆ : ಅಂದು-ಇಂದು

2010ನೇ ಇಸವಿ ಡಿಸೆಂಬರ್ ತಿಂಗಳಲ್ಲಿ ಅರಸೀಕೆರೆ ಕೆರೆ ಸಂಪೂರ್ಣ ಭರ್ತಿಯಾಗಿ, ಕೋಡಿ ಬಿದ್ದಿತ್ತು.  ಆದರೆ ನಂತರದ ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಇದೀಗ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದೆ.  ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಯುಗಾದಿ ಹಬ್ಬದಿಂದ ಹೊಸ ಸಂವತ್ಸರದ ಪ್ರಾರಂಭವಾಗಲಿದೆ.  ಈ ನೂತನ ಸಂವತ್ಸರದಲ್ಲಾದರೂ ನಮ್ಮೂರ ಹಾಗೂ ನಮ್ಮ ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳು ತುಂಬಿಹರಿಯಲಿ.


Share:

ಶುಕ್ರವಾರ, ಮಾರ್ಚ್ 17, 2017

ಮುಂಜಾನೆ ಮಂಜಲ್ಲಿ... ಅರಸೀಕೆರೆ

ಅರಸೀಕೆರೆ ಪಟ್ಟಣದಲ್ಲಿ ಇಂದು ಮುಂಜಾನೆ ಮಂಜುಕವಿದ ವಾತಾವರಣವಿತ್ತು.

Share:

ಮಂಗಳವಾರ, ಮಾರ್ಚ್ 7, 2017

ಬಾ ಬಾರೋ ಬಾರೋ ಮಳೆರಾಯ

ಬಾ ಬಾರೋ ಬಾರೋ ಮಳೆರಾಯ, ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಜನ ಜಾನುವಾರುಗಳಿಗೂ ನೀರಿಲ್ಲ.
ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಮೋಡ ಕವಿದು, ಮಳೆಯ ಆಸೆ ತೋರಿಸಿದೆ. ಇದರ ಜೊತೆ ಗಾಳಿಯೂ ಎದ್ದಿದ್ದು, ಮೋಡವನ್ನು ಬೇರೆಡೆಗೆ ಕೊಂಡೊಯ್ಯಬಹುದೆಂಬ ಆತಂಕ ಮೂಡಿದೆ.
ಚಿತ್ರ : ಬತ್ತಿಹೋದ ಅರಸೀಕೆರೆ ದೊಡ್ಡಕೆರೆಯ ಬಳಿ ಕಂಡ ಆಗಸದ ದೃಶ್ಯ
Share:

ಭಾನುವಾರ, ಮಾರ್ಚ್ 5, 2017

ಪರಿವರ್ತನೆ ಜಗದ ನಿಯಮ

ಅರಸೀಕೆರೆ ಪಟ್ಟಣದ ಮಾರುತಿನಗರ ಬಡಾವಣೆ ಬಿ.ಹೆಚ್.ರಸ್ತೆಯ ಬದಿಯಲ್ಲಿರುವ ಅರಳೀಮರದ ಚಿತ್ರ

Share:

ಮಂಗಳವಾರ, ಡಿಸೆಂಬರ್ 13, 2016

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....