ಪೊಲೀಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪೊಲೀಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಡಿಸೆಂಬರ್ 20, 2018

ಅರಸೀಕೆರೆ ಕಾಫಿ ಡೇ ಬಳಿ ರಸ್ತೆ ಅಪಘಾತ - 1 ಸಾವು

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಸೈದರಹಳ್ಳಿ ಗೇಟ್ ಕಾಫಿ ಡೇ ಸಮೀಪ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು ಸಂಜೆ 4 ಗಂಟೆಯ ಸಮಯದಲ್ಲಿ,  ಬಾಣಾವರದಿಂದ ಅರಸೀಕೆರೆಗೆ ಬರುತ್ತಿದ್ದ ಮಾರುತಿ ಒಮಿನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸುನಿಲ್ (28 ವರ್ಷ) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.  ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

(ಚಿತ್ರ ಮತ್ತು ಮಾಹಿತಿ : ಪೊಲೀಸ್ ಇಲಾಖೆ)




Share:

ಬುಧವಾರ, ಡಿಸೆಂಬರ್ 12, 2018

ಅರಸೀಕೆರೆ ಬಳಿ ರಸ್ತೆ ಅಪಘಾತ 1 ಸಾವು

ಅರಸೀಕೆರೆ ಬಳಿ ರಸ್ತೆ ಅಪಘಾತ 1 ಸಾವು

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಹೊಸಕಲ್ಲನಾಯ್ಕನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು (12-12-2018) ಮುಂಜಾನೆ ಸುಮಾರು 7.30 ಗಂಟೆಯ ಸಮಯದಲ್ಲಿ ಫೋರ್ಡ್ ಐಕಾನ್ ಕಾರು ಮತ್ತು ಮಾರುತಿ ವ್ಯಾಗನಾರ್ ಕಾರಿನ ನಡುವೆ  ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ  ಒಬ್ಬರು ಮೃತಪಟ್ಟಿದ್ದು, ಎರಡು ಕಾರಿನಲ್ಲಿದ್ದ ಐದು ಜನರಿಗೆ ಗಾಯಗಳಾಗಿರುತ್ತದೆ.

ಶಿವಮೊಗ್ಗದಿಂದ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ಫೋರ್ಡ್ ಐಕಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥಯ್ಯ (75) ಎಂಬುವರು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.  ಅವರ ಪತ್ನಿ ಜಯಶ್ರೀ (68) ರವರಿಗೆ, ವಾಹನ ಚಾಲನೆ ಮಾಡುತ್ತಿದ್ದ ಪುತ್ರ ಕಾರ್ತಿಕ್ (41) ರವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.

ನಿಟ್ಟೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಮಾರುತಿ ವ್ಯಾಗನಾರ್ ಕಾರಿನಲ್ಲಿದ್ದ ರವಿ ಚೌಹಾನ್ (30) ಗೋಪಾಲ್ (32) ಮತ್ತು ಗುರು (28) ಇವರುಗಳಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ)





Share:

ಸೋಮವಾರ, ನವೆಂಬರ್ 19, 2018

ಅರಸೀಕೆರೆ ಬಳಿ ರಸ್ತೆ ಅಪಘಾತ - ಸ್ಥಳದಲ್ಲೇ ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ರಂಗಾಪುರ ಕಾವಲ್ ಮುರಾರ್ಜಿ ವಸತಿ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಂದು (ಸೋಮವಾರ) ರಾತ್ರಿ ಸುಮಾರು 8.30 ರ ಸಮಯದಲ್ಲಿ ಮಾರುತಿ ಒಮಿನಿ ಹಾಗೂ ಬೊಲೆರೋ ಮಿನಿ ಗೂಡ್ಸ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾರುತಿ ಒಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಿವೆ.

ಅರಸೀಕೆರೆಯಿಂದ ಬೆಂಗಳೂರಿಗೆ ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ ಬೊಲೆರೋ ವಾಹನ ಹಾಗೂ ಬೆಂಗಳೂರಿನ ದೇವನಹಳ್ಳಿಯಿಂದ ಸಿಂಗಂಧೂರಿಗೆ ಪ್ರಯಾಣಿಸುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.   ಮಹೇಶ ಮತ್ತು ಮಧು ಎಂಬ ಹೆಸರಿನ ಸುಮಾರು 25-30 ವರ್ಷದ ಯುವಕರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ)




Share:

ಶುಕ್ರವಾರ, ಮಾರ್ಚ್ 9, 2018

ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥಸಂಚಲನ

ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥಸಂಚಲನ

ಅರಸೀಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಇಂದು ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ರಾಬಿನ್ ರವರ ನೇತೃತ್ವದಲ್ಲಿ ಸುಮಾರು 50 ಜನ ಸಿಬ್ಬಂದಿಗಳು ಪಥಸಂಚಲನ ನಡೆಸಿದರು. ಇವರುಗಳ ಜೊತೆ ಅರಸೀಕೆರೆ ನಗರ ಠಾಣೆ ಇನ್ಸ್ ಪೆಕ್ಟರ್ ಪ್ರಭಾಕರ್, ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದರಾಮೇಶ್, ನಗರಠಾಣೆ ಪಿಎಸ್ಐ ಯೋಗಾಂಜನಪ್ಪ ರವರುಗಳು ಪಾಲ್ಗೊಂಡಿದ್ದರು. ಚುನಾವಣಾ ಪೂರ್ವ ಸಿದ್ಧತೆಗಾಗಿ ಹಾಸನ ಜಿಲ್ಲಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯಿಂದ ಪಥಸಂಚಲನೆ ನಡಸಲಾಗುತ್ತಿದ್ದು, ಇಂದು ಅರಸೀಕೆರೆ ತಾಲ್ಲೂಕಿನ ಗಂಡಸಿ, ಅರಸೀಕೆರೆ ಪಟ್ಟಣ, ಬಾಣಾವರ ಮತ್ತು ಜಾವಗಲ್ ನಲ್ಲಿ ಪಥಸಂಚಲನೆ ನಡೆಸಲಾಯಿತು.




Share:

ಸೋಮವಾರ, ನವೆಂಬರ್ 20, 2017

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ - 40 ಜನರಿಗೆ ಗಾಯ

Arsikere


ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಮೈಲನಹಳ್ಳಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭಾನುವಾರ ತಡರಾತ್ರಿ ಬಸ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಚಾಲಕರು ಸೇರಿದಂತೆ 40 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಂಗಳೂರಿನಿಂದ  ಸಿಮೆಂಟ್ ಚೀಲಗಳನ್ನು ಕೊಂಡೊಯ್ಯುತ್ತಿದ್ದ ಕೊಂಡೊಯ್ಯುತ್ತಿದ್ದ ಲಾರಿಯ ನಡುವೆ ಮೈಲನ ಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ತಿರುವಿನಲ್ಲಿ ಅಪಘಾತವಾಗಿದೆ.  ಅಪಘಾತದ ತೀವ್ರತೆಗೆ ಲಾರಿ ಮತ್ತು ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಗಾಯಗೊಂಡ ಕೆಲವರಿಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. ಅಪಘಾತದ ಪರಿಣಾಮ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.  ಅರಸೀಕೆರೆ ಮತ್ತು ತಿಪಟೂರು ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.  ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರಮಾಹಿತಿ : ಪೊಲೀಸ್ ಇಲಾಖೆ





Share:

ಸೋಮವಾರ, ಸೆಪ್ಟೆಂಬರ್ 25, 2017

ರಸ್ತೆ ಅಪಘಾತ : 5 ಜನರಿಗೆ ಗಾಯ

Arsikere : 


ಅರಸೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಿ.ಪಿ.ವೃತ್ತದ ಬಳಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಭಾಗ ಇಂದು ಸಂಜೆ ಸಂಭವಿಸಿದ ಅಪಘಾತದಲ್ಲಿ ಐವರಿಗೆ ಗಾಯಗಳಾಗಿದೆ.  ಕಡೂರು ಕಡೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ KA04 MQ 7154 ನಂಬರಿನ ಹುಂಡೈ i20 ಕಾರನ್ನು ಚಾಲನೆ ಮಾಡುತ್ತಿದ್ದ ಶಿವಕುಮಾರ್ ಎಂಬ ವ್ಯಕ್ತಿಯು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿದ್ದರ ಪರಿಣಾಮವಾಗಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ ಪಾದಚಾರಿಗಳಿಗೆ ಹಾಗೂ ನಿಲುಗಡೆ ಮಾಡಿದ್ದ ಮಾರುತಿ 800 ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. 

ಅಪಘಾತದಲ್ಲಿ ವೈ.ಬೊಮ್ಮೇನಹಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಈಶ್ವರಪ್ಪ ಮತ್ತು ಸುಭಾಷ್ ನಗರದ ವಾಸಿಯಾದ ಮಂಜುನಾಥ ಎಂಬುವರಿಗೆ ತಲೆಯ ಭಾಗಕ್ಕೆ ತೀವ್ರವಾದ ಗಾಯಗಾಳಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಿಕೊಡಲಾಗಿದೆ.  ಅರಸೀಕೆರೆ ವಿವೇಕಾನಂದ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರಾದ ಜಯಶ್ರೀ ಮತ್ತು ವೀಣಾ ಎಂಬ ಯುವತಿಯರಿಗೆ ಮತ್ತು ಬಸವರಾಜ ಪುರ ಗ್ರಾಮದ ಶಿಕ್ಷಕಿಯಾದ ಮಂಗಳಾಕುಮಾರಿ ಎಂಬುವರಿಗೆ ಗಾಯಗಳಾಗಿದ್ದು, ಅರಸೀಕೆರೆಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಾಹನ ಚಾಲಕರನ್ನು ದಸ್ತಗಿರಿ ಮಾಡಲಾಗಿದ್ದು, ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Share:

ಬುಧವಾರ, ಆಗಸ್ಟ್ 9, 2017

ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Arsikere


ಶಾಲಾ ಕಾಲೇಜು ವ್ಯಾಸಂಗಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಕೆಲ ಬಸ್ಸಿನಲ್ಲಿ ಹತ್ತಲು ಅವಕಾಶ ನೀಡುತ್ತಿಲ್ಲವಾದ್ದರಿಂದ, ಮತ್ತು ಶಾಲಾ ಕಾಲೇಜು ಪ್ರಾರಂಭದ ಸಮಯಕ್ಕೆ ತಲುಪುವಂತೆ ಬಸ್ಸುಗಳ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸಿದರು.  ಇದರಿಂದಾಗಿ ಪಟ್ಟಣದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಸಾರಿಗೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿಲೋಮೀಟರ್ ವರೆಗೂ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.


ಚಿತ್ರ ಮಾಹಿತಿ : ಪೋಲೀಸ್ ಇಲಾಖೆ



Share:

ಗುರುವಾರ, ಜುಲೈ 27, 2017

ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ

Arsikere


ಅರಸೀಕೆರೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಅರಸೀಕೆರೆ ಪೊಲೀಸ್ ಉಪವಿಭಾಗದ ವತಿಯಿಂದ “ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ” ಜರುಗಿತು.  ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ.ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಈ ನೂತನ ಗಸ್ತು ವ್ಯವಸ್ತೆಯ ಬಗ್ಗೆ ಮಾಹಿತಿಯನ್ನು ನೀಡಿದರು.  ಇದೇ ಸಂದರ್ಭದಲ್ಲಿ ಗಸ್ತು ಸದಸ್ಯರುಗಳು ಗಮನಸೆಳೆದ ಪ್ರಶ್ನೆಗಳಿಗೆ ಉತ್ತರಿಸಿದರು.  ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ, ಗ್ರಾಮಾಂತರ ಪಿ.ಎಸ್.ಐ ಪುರುಷೋತ್ತಮ, ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.



Share:

ಬುಧವಾರ, ಮೇ 24, 2017

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

Accident near Arsikere - 1 Died, 20 injured


ಗೋಕರ್ಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಶ್ರೀಕುಮಾರ್ ಟ್ರಾವಲ್ಸ್ ಗೆ ಸೇರಿದ ಖಾಸಗಿ ಸಾರಿಗೆ ಬಸ್ಸು ಅರಸೀಕೆರೆ ಕಸಬಾ ಹೋಬಳಿ ಕಲ್ಲನಾಯ್ಕನಹಳ್ಳಿ ಗೇಟ್ ಬಳಿ (ಕಾಫಿ ಡೇ ಹತ್ತಿರ) ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಯ ಸಮಯದಲ್ಲಿ ರಸ್ತೆಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಚಾಲಕ ಸಿದ್ದಾಪುರ ಮೂಲದ ಮಂಜುನಾಥ ನಾಯಕ್ (38 ವರ್ಷ) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಬಸ್ಸಿನಲ್ಲಿದ್ದ 20 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಮತ್ತು  ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ಈ ಅಪಘಾತಕ್ಕೆ ಬಸ್ಸಿನ ಚಾಲಕರಿಗೆ ನಿದ್ರೆ ಮಂಪರು ಕಾರಣ ಎಂದು ಊಹಿಸಲಾಗಿದೆ.  ಬಸ್ಸು ಸಂಪೂರ್ಣವಾಗಿ ರಸ್ತೆಯ ಬಲಭಾಗಕ್ಕೆ ಬಂದು ಮರಕ್ಕೆ ಗುದ್ದಿದೆ.  ಬಸ್ ಡಿಕ್ಕಿ ಹೊಡೆದದ್ದರಿಂದ ರಸ್ತೆಬದಿಯ ಮರ ಸಂಪೂರ್ಣ ಬುಡಮೇಲಾಗಿದೆ ಎಂದರೆ, ಬಸ್ಸಿನ ವೇಗ ಎಷ್ಟಿರಬಹುದೆಂದು ಅಂದಾಜಿಸಬಹುದು.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ, ಅರಸೀಕೆರೆ)

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ


ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

Share:

ಶುಕ್ರವಾರ, ಮೇ 5, 2017

ರಾಜಾಸ್ಥಾನದಲ್ಲಿದ್ದ ಅರಸೀಕೆರೆಯ ಯುವತಿಯ ರಕ್ಷಣೆ

ರಾಜಾಸ್ಥಾನದಲ್ಲಿದ್ದ ಅರಸೀಕೆರೆಯ ಯುವತಿಯ ರಕ್ಷಣೆ


ಅರಸೀಕೆರೆ ಪಟ್ಟಣದ  ಯುವತಿಯೊಬ್ಬಳಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ರಾಜಾಸ್ಥಾನದ ಪುರುಷನೊಂದಿಗೆ ವಿವಾಹ ಮಾಡಿಸಿದ್ದ ಪ್ರಕರಣವನ್ನು ಅರಸೀಕೆರೆ ನಗರ ಠಾಣೆ ಪೊಲೀಸರು ಭೇದಿಸಿ ಯುವತಿಯನ್ನು ರಕ್ಷಿಸಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ. ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಇಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.


ಅರಸೀಕೆರೆಯ ಯುವತಿಯು ಕಳೆದ ವರ್ಷ ಕಾಣೆಯಾಗಿದ್ದಳು. ಆಕೆ ಕಾಣೆಯಾದ ಏಳು ತಿಂಗಳ ಬಳಿಕ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.  ಅರಸೀಕೆರೆ ಪೊಲೀಸರು ಯುವತಿಯ ತಾಯಿಯಿಂದ ಕೆಲವು ಮಹತ್ವದ ವಿಚಾರಗಳನ್ನು ಸಂಗ್ರಹಿಸಿ, ಯುವತಿಯು ರಾಜಾಸ್ಥಾನದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡರು.  ಹಾಸನ ಎಸ್.ಪಿ ರವರ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಪ್ರಕರಣ ಪತ್ತೆ ಕಾರ್ಯ ಪ್ರಾರಂಭಿಸಲಾಯಿತು.

ಅರಸೀಕೆರೆ ಯುವತಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಆಕೆಯನ್ನು ಅಜ್ಞಾತ ಸ್ಥಳದಲ್ಲಿ ಬಂಧಿಯಾಗಿಟ್ಟು, ನಂತರ ಆಕೆಯನ್ನು ಚೆನ್ನೈಗೆ ಕರೆದೊಯ್ಯಲಾಗಿತ್ತು.  ಅಲ್ಲಿಂದ ರಾಜಾಸ್ಥಾನಕ್ಕೆ ಕರೆದೊಯ್ದು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರಿಂದ ಭಾರೀ ಪ್ರಮಾಣದ ಹಣ ಪಡೆದು ಆತನೊಂದಿಗೆ ವಿವಾಹ ಮಾಡಿಸಲಾಗಿತ್ತು.  ಈ ಯುವತಿಯ ಅಕ್ಕಪಕ್ಕದ ಮನೆಯಲ್ಲಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದು, ಸಧ್ಯ ಈ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.  ಈ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್.ಪಿ. ರಾಹುಲ್ ಕುಮಾರ್ ಶಹಪೂರ್ವಾಡ್ ತಿಳಿಸಿದರು.

ಪತ್ರಿಕಾ ಗೊಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ ಹಾಗೂ ಅರಸೀಕೆರೆ ನಗರಠಾಣೆ ಇನ್ಸ್ ಪೆಕ್ಟರ್ ನಿರಂಜನ್ ಕುಮಾರ್ ಉಪಸ್ಥಿತರಿದ್ದರು.


(ಚಿತ್ರ: ವಾರ್ತಾ ಇಲಾಖೆ, ಹಾಸನ)


Share:

ಶನಿವಾರ, ಏಪ್ರಿಲ್ 22, 2017

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲಿಯೇ ಇಬ್ಬರ ಸಾವು

Arsikere :

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ರಾಮಸಾಗರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶನಿವಾರ ಬೆಳಿಗ್ಗೆ ಸುಮಾರು 8 ಗಂಟೆಯ ಸಮಯದಲ್ಲಿ ಟಾಟಾ ವಿನ್ಜರ್ ವ್ಯಾನ್ ಮತ್ತು ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. 


ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ದಾಸನಪುರದ ರಂಗ (27 ವರ್ಷ) ಮತ್ತು ಗೋವಿಂದ (26 ವರ್ಷ) ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಇದೇ ಕಾರಿನಲ್ಲಿದ್ದ ದಯಾನಂದ ಹಾಗೂ ಮಂಜೇಗೌಡ ಎಂಬುವರಿಗೆ ತೀವ್ರಸ್ವರೂಪದ ಗಾಯವಾಗಿದೆ.  ಟಾಟಾ ವ್ಯಾನಿನ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು  ಇವರುಗಳಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ದುರ್ಘಟನೆ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.  ಅಪಘಾತಕ್ಕೊಳಗಾಗಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.   ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ/ಮಾಹಿತಿ : ಅರಸೀಕೆರೆ ಗ್ರಾಮಾಂತರ ಪೊಲೀಸ್ ಇಲಾಖೆ)







Share:

ಗುರುವಾರ, ಮಾರ್ಚ್ 30, 2017

ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇಂದು ಮಧ್ಯಾನ್ಹ ಸುಮಾರು 3 ಗಂಟೆ ಸಮಯದಲ್ಲಿ ಮಾರುತಿ ಶಿಫ್ಟ್ ಡಿಜೈರ್ ಕಾರು ಮತ್ತು ಬೈಕ್ ನಡುವ ಜರುಗಿದ ರಸ್ತೆ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.  KA13 N 7636 ನಂಬರಿನ ಶಿಫ್ಟ್ ಕಾರಿನ  ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡು, ಎದುರಿನಿಂದ KA13 5433  ನಂಬರಿನ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಸವಾರರಾದ ಲಿಂಗರಾಜು (55 ವರ್ಷ) ಹಾಗೂ ರವಿ (45 ವರ್ಷ) ಇಬ್ಬರೂ ತೀರ್ವವಾಗಿ ಗಾಯಗೊಂಡರು.  ಇಬ್ಬರಿಗೂ ಚಿಕಿತ್ಸೆಗಾಗಿ  ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು.  ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮತ್ತು ಮಾಹಿತಿ : ಪೊಲೀಸ್ ಇಲಾಖೆ)

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು

Share:

ಶುಕ್ರವಾರ, ಮಾರ್ಚ್ 17, 2017

ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ

 ಅರಸೀಕೆರೆ : ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ


ಅರಸೀಕೆರೆ ನಗರ ಹಾಗೂ ಗ್ರಾಮಾತರ ವೃತ್ತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪದೋನ್ನತಿ ಹೊಂದಿದ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ  ಅರಸೀಕೆರೆ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ. ಧಶರಥ ಮೂರ್ತಿ ರವರು, ಪೊಲೀಸ್ ಮುಖ್ಯಪೇದೆಯಿಂದ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದವರಿಗೆ ಶಾಲು ಹೊದಿಸಿ ಸನ್ಮಾನಿಸಿದರು ಹಾಗೂ ಪೇದೆಯಿಂದ ಮುಖ್ಯಪೇದೆಯಾಗಿ ಪದೋನ್ನತಿ ಹೊಂದಿದವರ ಬಲಭುಜಕ್ಕೆ ಚೌರಿನ್ (ಮೂರು ಪಟ್ಟಿ ಉಳ್ಳ ಚಿನ್ಹೆ) ಅಳವಡಿಸಿ ಅಭಿನಂದಿಸಿದರು.

ಅರಸೀಕೆರೆ ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀ.ನಿರಂಜನ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಸಿದ್ದರಾಮೇಶ್ವರ, ಸಬ್ ಇನ್ಪೆಕ್ಟರ್ ಗಳಾದ ಶ್ರೀ. ಗಂಗಾಧರನಾಯಕ್, ಪುರುಷೋತ್ತಮ್, ನಟರಾಜ್ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



 







(ಚಿತ್ರಗಳು : ಪೊಲೀಸ್ ಇಲಾಖೆ)
Share:

ಭಾನುವಾರ, ಮಾರ್ಚ್ 12, 2017

ಅರಸೀಕೆರೆ ಕೋಡಿಹಳ್ಳಿಬಳಿ ರಸ್ತೆ ಅಪಘಾತ

ಅರಸೀಕೆರೆ ಪಟ್ಟಣದ ಹೊರವಲಯದಲ್ಲಿರುವ ಕೋಡಿಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭಾನುವಾರ ಸಂಜೆ 4.15 ರ ಸಮಯದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಡೆದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಕುಣಿಗಲ್ ಡಿಪೋ ಬಸ್ಸು ಮತ್ತು ತಿಪಟೂರು ಕಡೆಯಿಂದ ಅರಸೀಕೆರೆಗೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ತುಮಕೂರು ಜಿಲ್ಲೆ ಕಿಬ್ಬನಹಳ್ಳಿಕ್ರಾಸ್ ಬಳಿಯ ಬಿಳಿಗೆರೆ ವಾಸಿಯಾದ ಬಸವರಾಜ (50 ವರ್ಷ) ಮೃತಪಟ್ಟವರು. ಇವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವಣ್ಣ (50 ವರ್ಷ) ಮತ್ತು ಲಿಂಗರಾಜು (35 ವರ್ಷ) ಇವರುಗಳಿಗೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳಿಸಿಕೊಡಲಾಗಿದೆ. ಇವರಪೈಕಿ ಶಿವಣ್ಣನವರ ಪರಿಸ್ಥಿತಿ ಗಂಭೀರವಾಗಿದೆ.

ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Share:

ಗುರುವಾರ, ಮಾರ್ಚ್ 9, 2017

ಅಪರಿಚಿತ ವಾಹನಕ್ಕೆ ಬಲಿಯಾದ ಜಿಂಕೆ

ಅರಸೀಕೆರೆ ತಾಲ್ಲೂಕಿನ ಜಾಜೂರು ಸಸ್ಯಕ್ಷೇತ್ರದ ಬಳಿ ಗುರುವಾರ ಮುಂಜಾನೆ ಮೇವು ಅರಸುತ್ತಾ ಬಂದಿದ್ದ ಜಿಂಕೆಯೊಂದು ರಾಷ್ಟ್ರೀಯ ಹೆದ್ದಾರಿ 206ನ್ನು ದಾಟುತ್ತಿದ್ದವೇಳೆ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು.  ರಸ್ತೆಬದಿಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಜಿಂಕೆಯನ್ನು ಕಂಡ ಸಮೀಪದ ಕೆಫೆ ಕಾಫಿ ಡೇ ಕಾರ್ಮಿಕರು ಆ ಜಿಂಕೆಗೆ ನೀರು ಕುಡಿಸಿ ಆರೈಕೆ ಮಾಡಿ, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು.  ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿತ್ತು.  ಜಿಂಕೆಯ ಕಳೇಬರವನ್ನು ಜಾಜೂರು ಸಸ್ಯಕ್ಷೇತ್ರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಚಿತ್ರಕೃಪೆ : ಪೊಲೀಸ್ ಇಲಾಖೆ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....