ಧಾರ್ಮಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಧಾರ್ಮಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 28, 2019

ಅರಸೀಕೆರೆ ತಾಲ್ಲೂಕು ಯಳವಾರೆ ಶ್ರೀ ಹುಚ್ಚಮ್ಮದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ

ಅರಸೀಕೆರೆ ತಾಲ್ಲೂಕು ಯಳವಾರೆ ಶ್ರೀ ಹುಚ್ಚಮ್ಮದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ
ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಳವಾರೆ ಗ್ರಾಮದೇವತೆ ಶ್ರೀ ಹುಚ್ಚಮ್ಮದೇವಿಯವರ ಮೂಲ ಸನ್ನಿಧಿಯಲ್ಲಿ, ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ಯಳವಾರೆ ಹುಚ್ಚಮ್ಮದೇವಿ, ಹಾರನಹಳ್ಳಿ ಕೋಡಮ್ಮದೇವಿ, ಚಲುವರಾಯಸ್ವಾಮಿ, ದೂತರಾಯಸ್ವಾಮಿ, ಕೆಂಚರಾಯಸ್ವಾಮಿ ದೇವರುಗಳ ಸಮ್ಮುಖದಲ್ಲಿ, ದಿನಾಂಕ 28-07-2019ನೇ ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ಮತ್ತು ನವಗ್ರಹ ಹೋಮ ಹಾಗೂ ದೇವಿಗೆ ಮಹಾಭಿಷೇಕವನ್ನು ನಡೆಸಲಾಯಿತು.
ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
Share:

ಶುಕ್ರವಾರ, ಜುಲೈ 26, 2019

ಆಡಿಕೃತ್ತಿಕೆ

ಅರಸೀಕೆರೆ ನಗರದ "ಆನೆ ಬೆಟ್ಟದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರ" ದೇವಾಲಯದಲ್ಲಿ "ಆಡಿಕೃತ್ತಿಕೆ" ಪ್ರಯುಕ್ತ ಇಂದು (26-07-2019, ಶುಕ್ರವಾರ) ಬೆಳಿಗ್ಗೆ ಶ್ರೀಯವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು





ಕಾರ್ಯಕ್ರಮದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


Share:

ಸೋಮವಾರ, ಜುಲೈ 22, 2019

ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ತೆರೆ

ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ತೆರೆ
ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಹದಿನೇಳನೆಯ ಹಾಗೂ ಕಡೆಯ ದಿನವಾದ 22-07-2019 ರಂದು ರಾತ್ರಿ ತಿರುಪತಿ ಅಡ್ಡೆಕಾರರ ಸೇವಾರ್ಥದ ಅಂಗವಾಗಿ ಶ್ರೀಯವರಿಗೆ ಗರುಡೋತ್ಸವ ಹಾಗೂ ಶ್ರೀ ಕೆಂಚರಾಯಸ್ವಾಮಿ ಮಣೇವು ಜರುಗಿತು. ನಂತರ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಳೆದ ಹದಿನೇಳು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿತು.
ಉತ್ಸವದ ವಿಡಿಯೋವನ್ನು ಈ ಕೆಳಗಿನ ಲಿಂಕ್ ಬಳಸಿ ಯೂಟ್ಯೂಬಿನಲ್ಲಿ ವೀಕ್ಷಿಸಿ.




ಕಾರ್ಯಕ್ರಮದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Share:

ಭಾನುವಾರ, ಜುಲೈ 21, 2019

ಮಾಲೇಕಲ್ಲು ತಿರುಪತಿ ಜಾತ್ರೆ - 16ನೇ ದಿನ

ಮಾಲೇಕಲ್ಲು ತಿರುಪತಿ ಜಾತ್ರೆ - 16ನೇ ದಿನ
ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಹದಿನಾರನೆಯ ದಿನವಾದ ಇಂದು (21-07-2019) ರಾತ್ರಿ ಶ್ರೀಯವರಿಗೆ ವಿಜಯೋತ್ಸವ ಜರುಗಿತು.




ಉತ್ಸವದ ವಿಡಿಯೋವನ್ನು ಯೂಟ್ಯೂಬಿನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ



Share:

ಶನಿವಾರ, ಜುಲೈ 20, 2019

ಮಾಲೇಕಲ್ಲು ತಿರುಪತಿ ಜಾತ್ರೆ - 15ನೇ ದಿನ

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಹದಿನೈದನೆಯ ದಿನವಾದ ಇಂದು (20-07-2019) ರಾತ್ರಿ ಶ್ರೀಯವರಿಗೆ ಶಯನೋತ್ಸವ ಜರುಗಿತು.


ಉತ್ಸವದ ವಿಡಿಯೋವನ್ನು ಯೂಟ್ಯೂಬಿನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


Share:

ಗುರುವಾರ, ಡಿಸೆಂಬರ್ 20, 2018

ಅರಸೀಕೆರೆಯಲ್ಲಿ ಹನುಮ ಜಯಂತಿ ಆಚರಣೆ

ಹನುಮ ಜಯಂತಿ

ಅರಸೀಕೆರೆ ನಗರದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಪ್ರಾಚೀನ ಆಂಜನೇಯ ಸ್ವಾಮಿಯವರ ದೇವಸ್ಥಾನದಲ್ಲಿ ಗುರುವಾರದಂದು ಹನುಮ ಜಯಂತಿಯ ಅಂಗವಾಗಿ ಪ್ರಾಥಃಕಾಲ ಶ್ರೀಯವರಿಗೆ ಅಭಿಷೇಕ ಮತ್ತು ಕುಂಕುಮಾರ್ಚನೆ ಜರುಗಿತು.  ಸಂಜೆ ಆಂಜನೇಯಸ್ವಾಮಿಗೆ ವಿಶೇಷ ಅಲಂಕರ ಹಾಗೂ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಭಕ್ತರಿಗೆ ನೀಡುವ ಪ್ರಸಾದದ ಗುಣಮಟ್ಟವನ್ನು ಅರಸೀಕೆರೆ ತಾಲ್ಲೂಕು ವೈದ್ಯಾಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿತು.  ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಶ್ರೀ ಎನ್.ವಿ.ನಟೇಶ್ ರವರು ಹನುಮ ಜಯಂತಿ ಸಿದ್ಧತೆಗಳನ್ನು ಪರಿಶೀಲಿಸಿದರು.  ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವಿಶಂಕರನ್ ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.










Share:

ಮಂಗಳವಾರ, ಡಿಸೆಂಬರ್ 18, 2018

ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ವೈಭವದ ವೈಕುಂಠ ಏಕಾದಶಿ

ವೈಕುಂಠ ಏಕಾದಶಿ

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀ ಗೋವಿಂದರಾಜ ಸ್ವಾಮಿಯವರಿಗೆ ವಾಮನಾವತಾರದ ಅಲಂಕಾರ, ಮಹಾಲಕ್ಷ್ಮಿ ಅಮ್ಮನವರಿಗೆ ವಿಶೇಷ ಅಲಂಕಾರ, ವೈಕುಂಠ ದ್ವಾರದ ಮಂಟಪದಲ್ಲಿ ಶ್ರೀಯವರ ಉತ್ಸವ ಮೂರ್ತಿಗೆ ವೈಕುಂಠ ನಾರಾಯಣ ಅಲಂಕಾರ ಮಾಡಲಾಗಿತ್ತು. ಶ್ರೀ ಆಂಜನೇಯ ಸ್ವಾಮಿಗೆ ಹಾಗೂ  ಮಾಲೇಕಲ್ಲು ತಿರುಪತಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀನಿವಾಸ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ದೇವಸ್ಥಾನದಲ್ಲಿ  ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ ಹಾಗೂ ಪ್ರಾಕಾರದಲ್ಲಿ ಶ್ರೀಯವರ ಉತ್ಸವ ಜರುಗಿತು. ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡರು.  ಅರಸೀಕೆರೆಯ ವಿವಿಧ ಸಂಘ ಸಂಸ್ಥೆಗಳಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿಗೀತೆ, ದೇವರನಾಮ, ಭಜನೆ ಕಾರ್ಯಕ್ರಮ ಜರುಗಿತು.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕುಟುಂಬದವರಿಂದ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಹನೂರು ತಾಲ್ಲೂಕಿನ ಕಿಚ್ಚುಗುತ್ತಿ ಮಾರಮ್ಮ ವಿಷಾಹಾರ ದುರಂತ ಪ್ರಕರಣದ ಹಿನ್ನೆಲೆಯಲ್ಲಿ, ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಜರುಗುತ್ತಿರುವ ಅನ್ನಸಂತರ್ಪಣೆ ಪ್ರಾರಂಭಕ್ಕೆ ಮುಂಚಿತವಾಗಿ CFTRI ಸಿಬ್ಬಂದಿಗಳು ಆಹಾರ ಗುಣಮಟ್ಟ ಪರಿಶೀಲಿಸಿ, ಊಟದ ಸ್ಯಾಂಪಲ್ ಸಂಗ್ರಹಿಸಿದರು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.















Share:

ಗುರುವಾರ, ಡಿಸೆಂಬರ್ 13, 2018

ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಆಹ್ವಾನ

"ವೈಕುಂಠ ಏಕಾದಶಿ"

ದಿನಾಂಕ 18-12-2018, ಮಂಗಳವಾರದಂದು "ವೈಕುಂಠ ಏಕಾದಶಿ" ಪ್ರಯುಕ್ತ ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ವಿಶೇಷ ಅಲಂಕಾರ ಹಾಗೂ ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಬೆಳಿಗ್ಗೆ 7.30 ರಿಂದ ಸಂಜೆ 6.30 ರ ವರೆಗೆ ದೇವಸ್ಥಾನದ ವೈಕುಂಠ ದ್ವಾರದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀಯವರಿಗೆ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗುವುದು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ರವರ ವತಿಯಿಂದ ದೇವಸ್ಥಾನಕ್ಕೆ ಹೂವಿನ ವಿಶೇಷ ಅಲಂಕಾರ ಹಾಗೂ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.  ಅನ್ನ ಸಂತರ್ಪಣೆಗಾಗಿ ತಿರುಪತಿಯಲ್ಲಿರುವ ಆರ್ಯವೈಶ್ಯ ಕಲ್ಯಾಣ ಮಂದಿರವನ್ನು ಮಂಡಲಿಯ ವತಿಯಿಂದ ಉಚಿತವಾಗಿ ನೀಡಲಾಗಿರುತ್ತದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರ ವರೆಗೆ ಅರಸೀಕೆರೆಯ ವಿವಿಧ ಸಂಘ ಸಂಸ್ಥೆಗಳಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿಗೀತೆ, ದೇವರನಾಮ, ಭಜನೆ ಕಾರ್ಯಕ್ರಮ ಜರುಗಲಿದೆ.

ಅರಸೀಕೆರೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾಲೇಕಲ್ಲು ತಿರುಪತಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ವ್ಯವಸ್ಥೆ ಇರುತ್ತದೆ.


Share:

ಶನಿವಾರ, ನವೆಂಬರ್ 10, 2018

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ 77 ನೇ ವರ್ಷದ ವಿಸರ್ಜನಾ ಮಹೋತ್ಸವವು ಅದ್ದೂರಿಯಿಂದ ಆಚರಿಸಲ್ಪಟ್ಟಿತು. 

ನೆನ್ನೆ ಸಂಜೆ ಪ್ರಾರಂಭಗೊಂಡಿದ್ದ ಶ್ರೀಯವರ ಉತ್ಸವವು ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಸಂಜೆ 8 ಗಂಟೆಯ ಸಮಯಕ್ಕೆ ಕಂತೇನಹಳ್ಳಿ ಕೆರೆಯ ಬಳಿ ಆಗಮಿಸಿತು. ಕಂತೇನಹಳ್ಳಿ ನಿವಾಸಿಗಳು ಶ್ರೀಯವರಿಗೆ ಪೂಜೆ ಸಲ್ಲಿಸಿದ ನಂತರ, ಕೆರಯಂಗಳದಲ್ಲಿ ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ ಮಾಲೀಕರಾದ ಶ್ರೀ ಎ.ಆರ್.ಶಂಕರಾಚಾರ್ ರವರಿಂದ ಚಿತ್ತಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.  ನಂತರ ಶ್ರೀಯವರನ್ನು ಕ್ರೇನ್ ಮೂಲಕ ಕಂತೆನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಅರಸೀಕೆರೆ ಪೊಲೀಸ್ ಡಿ.ವೈ.ಎಸ್.ಪಿ ಶ್ರೀ ಸದಾನಂದ ತಿಪ್ಪಣ್ಣವರ ರವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.








Share:

ಶುಕ್ರವಾರ, ನವೆಂಬರ್ 9, 2018

ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ

ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ

ಅರಸೀಕೆರೆ ಶಾಸಕರಾದ ಶ್ರೀ ಕೆ.ಎಂ.ಶಿವಲಿಂಗೇಗೌಡರು ಶ್ರೀ ಪ್ರಸನ್ನ ಗಣಪತಿಯವರ ವಿಗ್ರಹವನ್ನು ಸಾಂಕೇತಿಕವಾಗಿ ಜರುಗಿಸುವ ಮೂಲಕ ಎರಡು ದಿನಗಳ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನೂರಾರು ಭಕ್ತರು ಈ ಕಾರ್ಯಕ್ಕೆ ಸಹಕರಿಸಿದರು.

ನಂತರ, ವಾಚನಾಲಯ ರಸ್ತೆಯಲ್ಲಿ ಅರಸೀಕೆರೆ ಶಾಸಕ ಶ್ರೀ. ಕೆ.ಎಂ. ಶಿವಲಿಂಗೇಗೌಡ ಹಾಗೂ ವಿವಿಧ ಸಮಾಜದ ಮುಖಂಡರುಗಳು ಈಡುಗಾಯಿ ಸೇವೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಸಮಾಜ, ಸಂಸ್ಥೆಗಳಿಂದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ರಾತ್ರಿ, ಹಾಸನ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಗಣಪತಿ ಉತ್ಸವ ಆಗಮಿಸಿದ ವೇಳೆ, ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ್ ಮಾಲೀಕರಾದ ಎ.ಆರ್.ಶಂಕರಾಚಾರ್ ರವರಿಂದ ಬಣ್ಣಬಣ್ಣದ ಚಿತ್ತಾಕರ್ಶಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು




















Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....