ಭಾನುವಾರ, ಮಾರ್ಚ್ 5, 2017
ಶನಿವಾರ, ಮಾರ್ಚ್ 4, 2017
ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ
ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ ಅತ್ಯಂತ ಸುಲಭವಾಗಿ ವೀಕ್ಷಿಸಬಹುದು.
ಈ ಕೆಳಗಿನ ಲಿಂಕ್ ಬಳಸಿ, ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ.
https://play.google.com/store/apps/details?id=com.wArsikere_4589535
ಈ ಆಪ್ ಸಂಪೂರ್ಣ ಉಚಿತವಾಗಿದೆ.
ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ
ಈ ಕೆಳಗಿನ ಲಿಂಕ್ ಬಳಸಿ, ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ.
https://play.google.com/store/apps/details?id=com.wArsikere_4589535
ಈ ಆಪ್ ಸಂಪೂರ್ಣ ಉಚಿತವಾಗಿದೆ.
ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ
ಬುಧವಾರ, ಮಾರ್ಚ್ 1, 2017
ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 110ನೇ ಜನ್ಮದಿನೋತ್ಸವ
ನಡೆದಾಡುವ ದೇವರು, ನಾಡಿನ ವಿವಿಧ ಕೋಮಿನ ಲಕ್ಷಾಂತರ ದೀನ ದಲಿತ ಬಡ ಅನಾಥ ಮಕ್ಕಳ ಬಾಳಿನ ಭಾಗ್ಯದೇವತೆ, ಪರಮಪೂಜ್ಯ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಡಾ|| ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 109 ಸಂವತ್ಸರಗಳನ್ನು ಸಂಪನ್ನಗೊಳಿಸಿ ದಿನಾಂಕ 01-04-2017ಕ್ಕೆ 110ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು, ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡ ಸಿಂಗರಿಸಿದ ರಥ ಸಂಚರಿಸುತ್ತಿದೆ.
ಇಂದು ಸಂಜೆ 8 ಗಂಟೆಗೆ ಅರಸೀಕೆರೆ ಪಟ್ಟಣಕ್ಕೆ ಶ್ರೀಯವರ ರಥ ಆಗಮಿಸಿತು. ವಿವಿಧ ಸಮಾಜದ ಗಣ್ಯರು, ಶರಣರು ರಥಕ್ಕೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
ಇಂದು ಸಂಜೆ 8 ಗಂಟೆಗೆ ಅರಸೀಕೆರೆ ಪಟ್ಟಣಕ್ಕೆ ಶ್ರೀಯವರ ರಥ ಆಗಮಿಸಿತು. ವಿವಿಧ ಸಮಾಜದ ಗಣ್ಯರು, ಶರಣರು ರಥಕ್ಕೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
ಭಾನುವಾರ, ಫೆಬ್ರವರಿ 26, 2017
ಅರಸೀಕೆರೆ ದೊಡ್ಡಕೆರೆಯ ಒಡಲು ಬರಿದಾಗಲು ಕ್ಷಣಗಣನೆ
ಅರಸೀಕೆರೆ ದೊಡ್ಡಕೆರೆಯ ಒಡಲು ಬರಿದಾಗಲು ಕ್ಷಣಗಣನೆ
ಈಗಿನ್ನೂ ಫೆಬ್ರವರಿ ತಿಂಗಳು, ನಮ್ಮ ಅರಸೀಕೆರೆ ದೊಡ್ಡಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರು ಬಿಸಿಲಿನ ಝಳಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿದೆ. ಬಹುಶಃ ಇನ್ನೊಂದು ಹದಿನೈದು ದಿನಗಳಲ್ಲಿ ನಮ್ಮ ಕೆರೆಯಲ್ಲಿರುವ ನೀರು ಖಾಲಿಯಾಗಿ, ಕೆರೆಯ ಒಡಲು ಸಂಪೂರ್ಣ ಬರಿದಾಗಲಿದೆ. ಶಿವರಾತ್ರಿಯಿಂದ ನಿಜವಾದ ಬೇಸಿಗೆ ಶುರುವಾಗುತ್ತದೆ, ಅಂದರೆ ಮುಂದಿನ ದಿನಗಳು ಹೇಗಿರುತ್ತೆಂದು ಊಹಿಸಬಹುದು.
ಕೇವಲ ಹದಿನೈದು ದಿನಗಳ ಅಂತರದಲ್ಲಿ ನಮ್ಮೂರ ಕೆರೆಯ ನೀರು ಇಂಗಿಹೋದ ಹಂತಗಳನ್ನು ಮತ್ತು ಕೆರೆಯ ಭೂಮಿಯು ಬಾಯ್ತೆರೆದಿರುವುದನ್ನು ಈ ಚಿತ್ರಗಳಲ್ಲಿ ನೋಡಬಹುದು.
ಇಂತಹ ಸಂದರ್ಭದಲ್ಲೂ, ನಮ್ಮ ಅರಸೀಕೆರೆ ಪಟ್ಟಣದ ಮನೆಮನೆಗಳಿಗೆ ಹೇಮಾವತಿಯ ಶುದ್ಧ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಸರಬರಾಜಾಗುತ್ತಿದೆ, ಒಂದೊಂದು ಹನಿ ನೀರನ್ನೂ ಉಳಿಸುವುದು ನಮ್ಮಗಳ ಕರ್ತವ್ಯ. ದಯವಿಟ್ಟು ನೀರನ್ನು ಪೋಲು ಮಾಡಬೇಡಿ.
ಶುಕ್ರವಾರ, ಫೆಬ್ರವರಿ 24, 2017
ಮಹಾಶಿವರಾತ್ರಿ
ಅರಸೀಕೆರೆಯ ವಿವಿಧ ಶಿವ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವಲಿಂಗಕ್ಕೆ ಮಹಾಭಿಷೇಕ, ಮಹಾಮಂಗಳಾರತಿ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
| ಶಿವಾಲಯದಲ್ಲಿ ಶ್ರೀ ಚಂದ್ರಮೌಳೇಶ್ವನ ದರ್ಶನಕ್ಕೆ ಸಾಲಾಗಿ ನಿಂತ ಭಕ್ತರು |
| ಶಿವಾಲಯದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ |
| ರೀಡಿಂಗ್ ರೂಂ ರಸ್ತೆಯಲ್ಲಿರುವ ಶ್ರೀ ಭವಾನಿಶಂಕರ ಸ್ವಾಮಿ |
| ಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರಿಗೆ ಕ್ಷೀರಾಭಿಷೇಕ |











