ಅಶಕ್ತಸ್ತು ಭವೇತ್ ಸಾಧುಃ ಬ್ರಹ್ಮಚಾರೀ ಚ ನಿರ್ಧನಃ |
ವ್ಯಾಧಿತೋ ದೇವಭಕ್ತಶ್ಚ ವೃದ್ಧಾ ನಾರೀ ಪತಿವ್ರತಾ ||
’ಬಲವಿಲ್ಲದವನು ಸಜ್ಜನನಾಗುತ್ತಾನೆ. ಹಣವಿಲ್ಲದವನು ಬ್ರಹ್ಮಚಾರಿಯಾಗುತ್ತಾನೆ. ರೋಗಪೀಡಿತನು ದೇವಭಕ್ತನಾಗುತ್ತಾನೆ. ವಯಸ್ಸಾದ ಹೆಣ್ಣು ಹದಿಬದೆಯಾಗುತ್ತಾಳೆ.’
ಚಾಣಕ್ಯನೀತಿದರ್ಪಣದಲ್ಲಿ ಕಾಣಸಿಗುವ ಈ ಪದ್ಯ ವಿಡಂಬನಾತ್ಮಕವಾದದ್ದು. ಸಜ್ಜನತೆ ಬ್ರಹ್ಮಚರ್ಯ ದೇವಭಕ್ತಿ ಪಾತಿವ್ರತ್ಯ – ಇವುಗಳಲ್ಲೊಂದೊಂದೂ ಅತ್ಯಂತ ಮೌಲ್ಯಯುತವಾದದ್ದು. ಆದರೆ ಬೇರೆ ಗತಿಯಿಲ್ಲದೆ, ಅನಿವಾರ್ಯವಾಗಿ ಅದನ್ನೊಪ್ಪಿಕೊಳ್ಳಬೇಕಾಗಿ ಬಂದಾಗಲಷ್ಟೇ ಸ್ವೀಕರಿಸುವಾತನು ಆದರಾರ್ಹನಾಗುವುದಿಲ್ಲ. ’ನಪುಂಸಕನ ಸಂನ್ಯಾಸ’ ಎಂಬ ನುಡಿಗಟ್ಟೂ ಇದೇ ಅರ್ಥದಲ್ಲಿರುವುದು. ತಾತ್ಪರ್ಯವಿಷ್ಟು - ಸಾಮರ್ಥ್ಯ-ಅವಕಾಶಗಳಿದ್ದಾಗಲೂ ಮೌಲ್ಯವನ್ನು ಮನಗಂಡು ಯಾರು ಸಾಜ್ಜನ್ಯವೇ ಮೊದಲಾದ ಗುಣಗಳನ್ನು ಹೊಂದುತ್ತಾರೋ ಅವರೇ ಮಾನ್ಯರು. ದೌರ್ಬಲ್ಯಾದಿ ಅನಿವಾರ್ಯತೆಗಳಿಂದ ಬರುವ ಸಾಧುತ್ವಾದಿಗಳು ಮೌಲ್ಯಗಳಾಗಲಾರವು.
’ವೃದ್ಧಾ ನಾರೀ ಪತಿವ್ರತಾ’ ಎಂಬೀ ಪಾದ ಕೊನೆಯಲ್ಲಿ ಬರುವ ಇನ್ನೊಂದು ಸುಭಾಷಿತವೂ ಇದೆ –
ಆರ್ತಾ ದೇವಾನ್ ನಮಸ್ಯಂತಿ ತಪಃ ಕುರ್ವಂತಿ ರೋಗಿಣಃ |
ನಿರ್ಧನಾ ದಾನಮಿಚ್ಛಂತಿ ವೃದ್ಧಾ ನಾರೀ ಪತಿವ್ರತಾ ||
ತಾತ್ಪರ್ಯ ಹಿಂದಿನದ್ದೇ.
ಇದೇ ಆಶಯವನ್ನು ವ್ಯಕ್ತಪಡಿಸುವ ಇನ್ನೊಂದು ಸುಭಾಷಿತ –
ನವೇ ವಯಸಿ ಯಃ ಶಾಂತಃ ಸ ಶಾಂತ ಇತಿ ಕಥ್ಯತೇ |
ಧಾತುಷು ಕ್ಷೀಯಮಾಣೇಷು ಶಾಂತಿಃ ಕಸ್ಯ ನ ಜಾಯತೇ ||
ಯೌವನದಲ್ಲಿ ಯಾರು ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತಾನೋ ಅವನೇ ಶಾಂತ (ನಿಗ್ರಹಿ ಅಥವಾ ಸಂನ್ಯಾಸಿ) ಎಂದೆನಿಸುತ್ತಾನೆ. ಧಾತುಗಳು ಕಳೆದು ಹೋಗುತ್ತಿದ್ದಂತೆ ಯಾರು ತಾನೇ ನಿಗ್ರಹಿಗಳಾಗುವುದಿಲ್ಲ
ಶುಕ್ರವಾರ, ಜುಲೈ 28, 2017
ಗುರುವಾರ, ಜುಲೈ 27, 2017
ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ
Arsikere
ಅರಸೀಕೆರೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಅರಸೀಕೆರೆ ಪೊಲೀಸ್ ಉಪವಿಭಾಗದ ವತಿಯಿಂದ “ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ” ಜರುಗಿತು. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ.ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಈ ನೂತನ ಗಸ್ತು ವ್ಯವಸ್ತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಗಸ್ತು ಸದಸ್ಯರುಗಳು ಗಮನಸೆಳೆದ ಪ್ರಶ್ನೆಗಳಿಗೆ ಉತ್ತರಿಸಿದರು. ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ, ಗ್ರಾಮಾಂತರ ಪಿ.ಎಸ್.ಐ ಪುರುಷೋತ್ತಮ, ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಭಾನುವಾರ, ಜುಲೈ 16, 2017
ಅರಸೀಕೆರೆ ತಾಲ್ಲೂಕಿನ ಮತದಾರರ ಪಟ್ಟಿ ಪರಿಷ್ಕರಣೆ
Arsikere
ಮುಂಬರುವ ವಿಧಾನಸಭಾ
ಚುನಾವಣೆಯ ನಿಮಿತ್ತ ಅರಸೀಕೆರೆ ತಾಲ್ಲೂಕಿನ ಮತದಾರರ ಪಟ್ಟಿಯ ಪರಿಷ್ಕರಣೆಯು 01-07-2017 ರಿಂದ ಪ್ರಾರಂಭಗೊಂಡಿದ್ದು,
30-07-2017ನೇ ತಾರೀಖಿನವರೆಗೆ ನಡೆಯಲಿದೆ. ಮತದಾರರ ಪಟ್ಟಿಗೆ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಿಸುವವರು,
ತಿದ್ದುಪಡಿ ಮಾಡಿಸಬೇಕಾದವರು, ಪರಸ್ಥಳಕ್ಕೆ ವಲಸೆ ಹೋಗಿರುವವರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಲು
ನಿಮ್ಮ ನಿಮ್ಮ ಮತಗಟ್ಟೆಗೆ ಸಂಬಂಧಿಸಿದ ಚುನಾವಣಾ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಯಲ್ಲಿರುವ ಚುನಾವಣಾ
ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಸೋಮವಾರ, ಜುಲೈ 10, 2017
ರಸ್ತೆಯಲ್ಲಿ ಹರಿಯುತ್ತಿದೆ ಅರಸೀಕೆರೆ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯ
Arsikere
ಅರಸೀಕೆರೆ ಪಟ್ಟಣದ
ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯದ ಗುಂಡಿಯು (Septic Tank) ಸಂಪೂರ್ಣ ಭರ್ತಿಯಾಗಿ, ರಸ್ತೆಯ
ಮೇಲೆ ಉಕ್ಕಿ ಹರಿಯುತ್ತಿದ್ದು, ಶಿವಾನಂದ ಕಾಲೋನಿಯ ಜನತೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ
ನಿರ್ಮಾಣವಾಗಿದೆ. ಪಟ್ಟಣದಾದ್ಯಂತ ಡೆಂಗ್ಯೂ, ವೈರಲ್ ಜ್ವರದ ಹಾವಳಿ ಇದೆ, ಈ ನಡುವೆ ಆಸ್ಪತ್ರೆಯ ತ್ಯಾಜ್ಯಗಳು
ರಸ್ತೆಯಲ್ಲಿ ನಿಂತು ಅದರಲ್ಲಿ ಕುಳಿತ ಸೊಳ್ಳೆ, ನೊಣಗಳ ಮೂಲಕ ಜನಸಾಮಾನ್ಯರ ಆರೋಗ್ಯಕ್ಕೆ ಮತ್ತಷ್ಟು
ತೊಂದರೆ ಉಂಟಾಗುವ ಭೀತಿ ಎದುರಾಗಿದೆ. ಸರ್ಕಾರಿ ಜೆ.ಸಿ.ಆಸ್ಪತ್ರೆಯ
ಆಡಳಿತ ವೈದ್ಯಾಧಿಕಾರಿಗಳು ಈ ಕುರಿತು ಶೀಘ್ರ ಗಮನಹರಿಸಿ, ತ್ಯಾಜ್ಯದ ಗುಂಡಿಯನ್ನು ದುರಸ್ತಿಮಾಡಿಸಲು
ತುರ್ತು ಕ್ರಮ ಕೈಗೊಳ್ಳಬೇಕೆಂದು ಶಿವಾನಂದ ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ಶನಿವಾರ, ಜುಲೈ 8, 2017
ಅರಸೀಕೆರೆ ಮೂಲಕ ಸಾಗಿದ ಮಾನ್ಸೂನ್ ಬೈಸಿಕಲ್ ಸವಾರರು
Arsikere
ಬೆಂಗಳೂರಿನ
Cadence90 ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ “ಮಾನ್ಸೂನ್
ಬೈಕಿಂಗ್” (ಹಾಸನ-ಚಿಕ್ಕಮಗಳೂರು-ಹಾಸನ) ಪ್ರಯುಕ್ತ ಇಂದು ಬೆಳಿಗ್ಗೆ 31 ಸೈಕ್ಲಿಸ್ಟ್ ಗಳು ಅರಸೀಕೆರೆ
ಪಟ್ಟಣದ ಮೂಲಕ ಸಾಗಿದರು. ಬೆಳಿಗ್ಗೆ 8.30 ರ ಸಮಯಕ್ಕೆ
ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಕೆ.ಪಿ.ಎಸ್ ರವರ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಆಗಮಿಸಿದ
ಸೈಕಲ್ ಸವಾರರು, ಅಲ್ಲಿ ಲಘು ಉಪಹಾರ ಸೇವನೆ ಮಾಡಿದರು.
16 ವರ್ಷದಿಂದ 48 ವರ್ಷದ ವಯೋಮಾನದ 31 ಜನರ ತಂಡದಲ್ಲಿ 6 ಜನ ಮಹಿಳಾ ಸೈಕಲ್ ಸವಾರರೂ ಇದ್ದರು.
50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬೆಲೆಬಾಳುವ ಹೈಬ್ರೀಡ್ ಸೈಕಲ್ ಗಳು ಈ ತಂಡದಲ್ಲಿದ್ದವು.
Cadence90 ಸಂಸ್ಥೆಯ
ಮುಖ್ಯಸ್ಥೆ ಚೇತನ್ ರಾಮ್ ರವರು ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಪ್ರತಿವರ್ಷ ಮಾನ್ಸೂನ್ ಸಮಯದಲ್ಲಿ
ಸೈಕಲ್ ಸವಾರಿಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ
ವಿಶೇಷ ತರಬೇತಿಯನ್ನು ಹೊಂದಿದ ವಿವಿಧ ವಯೋಮಾನದ ಸೈಕಲ್ ಸವಾರರು ಪಾಲ್ಗೊಳ್ಳುತ್ತಾರೆ. ಸವಾರಿಯ ಬಗ್ಗೆ ಸಂಪೂರ್ಣ ಮುಜಾಗರೂಕತಾ ಕ್ರಮಗಳನ್ನು ಕೈಗೊಂಡಿರುತ್ತೇವೆ.
ಸೂಕ್ತ ಸ್ಥಳಗಳಲ್ಲಿ ಊಟ-ಉಪಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ ಜೊತೆಯಲ್ಲಿ ವಿಶೇಷ ವಾಹನಗಳನ್ನು
ಕರೆದೊಯ್ಯಲಾಗುತ್ತದೆ. ಈ ಸಲದ ಮಾನ್ಸೂಸ್ ಸವಾರಿಯು
ಹಾಸನದಿಂದ ಪ್ರಾರಂಭವಾಗಿ ಅರಸೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಮುಖಾಂತರ ಚಿಕ್ಕಮಗಳೂರು ತಲುಪಿ,
ಅಲ್ಲಿಂದ ಬೇಲೂರು ಮುಖಾಂತರ ಹಾಸನ ತಲುಪುವಂತೆ ಆಯೋಜಿಸಲಾಗಿದ್ದು, ಇದರ ಒಟ್ಟು ದೂರ ಅಂದಾಜು 200
ಕಿಮೀ ಆಗಲಿದೆ ಎಂದು ತಿಳಿಸಿದರು. ಅರಸೀಕೆರೆಯಲ್ಲಿ
ಉಪಹಾರ ಸೇವನೆಗೆ ಸ್ಥಳಾವಕಾಶ ನೀಡಿದ ಕೆ.ಪಿ.ಎಸ್ ಪ್ರಸನ್ನ ರವರಿಗೆ ಹಾಗೂ ಉಪಹಾರದ ವ್ಯವಸ್ಥೆಗಳನ್ನು
ಮಾಡಿದ್ದ ಹೆಚ್.ರಾಮಚಂದ್ರ ರವರಿಗೆ ಧನ್ಯವಾದಗಳನ್ನು ತಿಳಿಸಿದರು.










