ಶುಕ್ರವಾರ, ಡಿಸೆಂಬರ್ 29, 2017

ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ವೈಕುಂಠ ಏಕಾದಶಿ

"ವೈಕುಂಠ ಏಕಾದಶಿ"

"ವೈಕುಂಠ ಏಕಾದಶಿ" ಪ್ರಯುಕ್ತ ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಇಂದು ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ಶ್ರೀ ಗೋವಿಂದರಾಜ ಸ್ವಾಮಿಯವರಿಗೆ "ಗೋವರ್ಧನಗಿರಿಧಾರಿ" ಅಲಂಕಾರ ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಆಂಜನೇಯ ಸ್ವಾಮಿಯವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ದೇವಸ್ಥಾನದ ವೈಕುಂಠ ದ್ವಾರದಲ್ಲಿ  ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀಯವರಿಗೆ "ಗಜಾರೂಢ ವೈಕುಂಠನಾರಾಯಣ" ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.









Share:

ಸೋಮವಾರ, ಡಿಸೆಂಬರ್ 25, 2017

ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಆಹ್ವಾನ

"ವೈಕುಂಠ ಏಕಾದಶಿ"

ದಿನಾಂಕ 29-12-2017, ಶುಕ್ರವಾರದಂದು "ವೈಕುಂಠ ಏಕಾದಶಿ" ಪ್ರಯುಕ್ತ ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ ಪ್ರಾತಃಕಾಲ ಶ್ರೀಯವರಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ನಂತರ ವಿಶೇಷ ಅಲಂಕಾರ ಹಾಗೂ ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಬೆಳಿಗ್ಗೆ 7.30 ರಿಂದ ಸಂಜೆ 6.30 ರ ವರೆಗೆ ದೇವಸ್ಥಾನದ ವೈಕುಂಠ ದ್ವಾರದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀಯವರಿಗೆ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗುವುದು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ರವರ ವತಿಯಿಂದ ದೇವಸ್ಥಾನಕ್ಕೆ ಹೂವಿನ ವಿಶೇಷ ಅಲಂಕಾರ ಹಾಗೂ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.  ಅನ್ನ ಸಂತರ್ಪಣೆಗಾಗಿ ತಿರುಪತಿಯಲ್ಲಿರುವ ಆರ್ಯವೈಶ್ಯ ಕಲ್ಯಾಣ ಮಂದಿರವನ್ನು ಮಂಡಲಿಯ ವತಿಯಿಂದ ಉಚಿತವಾಗಿ ನೀಡಲಾಗಿರುತ್ತದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರ ವರೆಗೆ ಅರಸೀಕೆರೆಯ ವಿವಿಧ ಸಂಘ ಸಂಸ್ಥೆಗಳಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿಗೀತೆ, ದೇವರನಾಮ, ಭಜನೆ ಕಾರ್ಯಕ್ರಮ ಜರುಗಲಿದೆ.

ಅರಸೀಕೆರೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾಲೇಕಲ್ಲು ತಿರುಪತಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ವ್ಯವಸ್ಥೆ ಇರುತ್ತದೆ.

Share:

ಭಾನುವಾರ, ಡಿಸೆಂಬರ್ 24, 2017

ಅರಸೀಕೆರೆಯಲ್ಲಿ ಕ್ರಿಸ್ ಮಸ್ ಆಚರಣೆ

ಅರಸೀಕೆರೆಯಲ್ಲಿ ಕ್ರಿಸ್ ಮಸ್ ಆಚರಣೆ

ನಾಳೆ ಜರುಗಲಿರುವ ಏಸುಕ್ರಿಸ್ತರು ಹುಟ್ಟಿದ ದಿನವಾದ ಕ್ರಿಸ್ ಮಸ್ ಆಚರಣೆಗೆ ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಸಿ.ಎಸ್.ಐ ಚರ್ಚ್ ಮತ್ತು ರೈಲ್ವೆ ಕಾಲೋನಿಯಲ್ಲಿರುವ ಸಂತ ಮರಿಯ ಚರ್ಚ್ ಗಳನ್ನು ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ.  ಚರ್ಚಿನ ಆವರಣದಲ್ಲಿ ಏಸುಕ್ರಿಸ್ತರ ಜನನದ ಕಥೆ ಬಿಂಬಿಸುವ ಆಕರ್ಷಕ ಗೋದಲಿಯನ್ನು ನಿರ್ಮಿಸಲಾಗಿದೆ.







Share:

ಶುಕ್ರವಾರ, ಡಿಸೆಂಬರ್ 22, 2017

ಶಿವಸಂಚಾರ ನಾಟಕೋತ್ಸವ : ಸಾಯೋ ಆಟ

"ಶಿವಸಂಚಾರ ನಾಟಕೋತ್ಸವ"


ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿರುವ "ಶಿವಸಂಚಾರ ನಾಟಕೋತ್ಸವ"ದ ಕೊನೆಯ ದಿನದ ಕಾರ್ಯಕ್ರಮವು ಇಂದು ಸಂಜೆ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮಿಗಳು ಮತ್ತು ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಜರುಗಿತು. ಬಿಜೆಪಿ ಮುಖಂಡರಾದ ಜಿವಿಟಿ ಬಸವರಾಜು ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಇಂದು ಸಂಜೆ ಪ್ರದರ್ಶನಗೊಂಡ ನಾಟಕ "ಸಾಯೋ ಆಟ"

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ದ.ರಾ.ಬೇಂದ್ರೆಯವರು ರಚಿಸಿರುವ ಹಾಸ್ಯ ನಾಟಕ "ಸಾಯೋ ಆಟ".  ಈ ನಾಟಕ ನಮ್ಮ ಸುತ್ತಲಿನ ಸಮಾಜ, ರಾಜಕಾರಣ ಮತ್ತು ವ್ಯಕ್ತಿಗಳ ಮುಖಕ್ಕೆ ಕನ್ನಡಿ ಹಿಡಿವ, ನ್ಯೂನ್ಯತೆಗಳನ್ನು ತಿಳಿಸುವ ಕೆಲಸವನ್ನು ಲಘು ದಾಟಿಯಲ್ಲಿ, ಪ್ರಹಸನ ಮಾದರಿಯಲ್ಲಿ ನಮ್ಮ ಮುಂದಿಡುತ್ತಾ ಹೋಗುತ್ತದೆ.

ಕನ್ನಹಾಕಲು ಬಂದ ಕಳ್ಳನ ಮೇಲೆ ಗೋಡೆ ಬಿದ್ದು ಅವನು ಸಾಯುತ್ತಾನೆ. ಆ ಕಳ್ಳನ ಹೆಂಡತಿ ತನ್ನ ಗಂಡನ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವಂತೆ ರಾಜನಲ್ಲಿ ಬೇಡುತ್ತಾಳೆ.  ಮೊದಲು ಗೋಡೆಯ ಯಜಮಾನ, ಗೋಡೆ ಕಟ್ಟಿದ ಮೇಸ್ತ್ರಿ, ಕೂಲಿ ಹೀಗೆ ಒಬ್ಬರು ಮತ್ತೊಬ್ಬರ ಮೇಲೆ ಅಪವಾದ ಹೊರಿಸುತ್ತಾ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.   ಈ ನಾಟಕದ ಮೂಲಕ ಗಬ್ಬೆದ್ದು ಹೋದ ರಾಜಕಾರಣ, ಸಾಮಾಜಿಕ ವ್ಯವಸ್ಥೆ ಮತ್ತು ವ್ಯಕ್ತಿಗಳ ಠಕ್ಕತನಗಳು ಬೆಳಕಿಗೆ ಬರುತ್ತವೆ.









Share:

ಗುರುವಾರ, ಡಿಸೆಂಬರ್ 21, 2017

ಶಿವ ಸಂಚಾರ ನಾಟಕೋತ್ಸವ : ಚೋರ ಚರಣದಾಸ

"ಶಿವ ಸಂಚಾರ ನಾಟಕೋತ್ಸವ"

ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿರುವ  "ಶಿವಸಂಚಾರ ನಾಟಕೋತ್ಸವ"ದ ಎರಡನೇ ದಿನದ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಇಂದು ಸಂಜೆ ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಅರಸೀಕೆರೆಯ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಇಂದು ಸಂಜೆ ಪ್ರದರ್ಶನಗೊಂಡ ನಾಟಕ "ಚೋರ ಚರಣದಾಸ"

ಪ್ರಖ್ಯಾತ ನಿರ್ದೇಶಕ ಹಬೀಬ್ ತನ್ವೀರ್ ರವರು ರಾಜಸ್ಥಾನದ ಒಂದು ಜಾನಪದ ಕಥೆಯನ್ನು ಆಧರಿಸಿ ಹಿಂದಿಯಲ್ಲಿ ರೂಪಿಸಿದ ನಾಟಕವನ್ನು ಕನ್ನಡಕ್ಕೆ ಡಾ.ಸಿದ್ದಲಿಂಗ ಪಟ್ಟಣಶಟ್ಟಿರವರು ಅನುವಾದಿಸಿ ರಂಗರೂಪಕ್ಕೆ ತಂದಿದ್ದಾರೆ.  ಚರಣದಾಸ ಎಂಬ ಒಬ್ಬ ಸಾಮಾನ್ಯ ಕಳ್ಳ ಮತ್ತು ಅವನ ವಿಚಿತ್ರ ನಡೆ, ಬಡವರ ಮತ್ತು ಶೋಷಿತರ ಬಗೆಗಿನ ಕಳಕಳಿ, ಧರ್ಮ, ಗುರು, ಸಂಪ್ರದಾಯ ಮತ್ತು ಸತ್ಯನಿಷ್ಠೆ ಮುಂತಾದ ಗುಣಗಳನು ಎತ್ತಿತೋರಿಸುವ ಈ ನಾಟಕದಲ್ಲಿ ಹಾಸ್ಯ, ಸತ್ಯ, ನೀತಿ ಮತ್ತು ಸರಳ ಜೀವನದ ಪ್ರತಿಪಾದನೆಯಿದೆ.  ಈ ನಾಟಕವನ್ನು ಮಾಲತೇಶ್ ರಾ ಬಡಿಗೇರ್ ರವರು ನಿರ್ದೇಶನ ಮಾಡಿದ್ದಾರೆ.











Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....