ಶುಕ್ರವಾರ, ನವೆಂಬರ್ 20, 2009

ದಕ್ಷಿಣ ವಲಯ ಐ.ಜಿ.ಪಿ ಅರಸೀಕೆರೆ ಭೇಟಿ


ಅರಸೀಕೆರೆ ಪಟ್ಟಣಕ್ಕೆ ಆಗಮಿಸಿದ ದಕ್ಷಿಣ ವಲಯ ಐ.ಜಿ.ಪಿ ಜೀವನ್ ಕುಮಾರ್ ಗಾಂವ್‌ಕರ್ ರವರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ.ವಿ.ಮಲ್ಲಾಪುರ್ ರವರಿಂದ ಗೌರವ ವಂದನೆ ಸ್ವೀಕರಿಸಿದರು.
Share:

ಗುರುವಾರ, ನವೆಂಬರ್ 19, 2009

ವಿಫಲಗೊಂಡ ಮಾತುಕತೆ - ಆಮರಣಾಂತ ಉಪವಾಸ ಕುಳಿತ ಶಾಸಕ


ಧರಣಿ ಸತ್ಯಾಗ್ರಹ ನಡೆಸುತ್ತಿರುವ ಅರಸೀಕೆರೆ ಶಾಸಕರೊಂದಿಗೆ ಚೆಸ್ಕ್‌ನ ವ್ಯವಸ್ಥಾಪ ನಿರ್ದೇಶಕ ರಮೇಶ್ ಹಾಗೂ ಚೀಫ್ ಇಂಜಿನಿಯರ್ ಶಾಂತಿ ರವರು ಮಾತುಕತೆ ನಡೆಸಿದರು. ಶಾಸಕರ ಕೆಲವು ಬೇಡಿಕೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಎಲ್ಲ ಬೇಡಿಕೆಗಳು ಈಡೇರಿಸಲು ಆಗುವುದಿಲ್ಲ ಎಂದರು. ಇದರಿಂದ ಕುಪಿತರಾದ ಶಾಸಕರು ನಾಳೆಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆಂದರು.
Share:

ಔಷಧಿ ಅಂಗಡಿಗೆ ಕಲ್ಲು ಹೊಡೆದ ಕಿಡಿಗೇಡಿಗಳು



ಔಷಧಿ ಅಂಗಡಿಗೆ ಕಲ್ಲು ಹೊಡೆದ ಕಿಡಿಗೇಡಿಗಳು :-
ಅರಸೀಕೆರೆ ಪಟ್ಟಣದಲ್ಲಿ ಇಂದು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಕೆಲವು ಕಿಡಿಗೇಡಿ ಯುವಕರು ಔಷಧಿ ಅಂಗಡಿಗಳಿಗೆ ದಾಳಿ ಮಾಡಿ, ಅಂಗಡಿ ಮುಚ್ಚುವಂತೆ ಮಾಲೀಕರನ್ನು ಬೆದರಿಸಿದ್ದಾರೆ. ಬಿ.ಹೆಚ್.ರಸ್ತೆಯಲ್ಲಿರುವ ಬಿ.ಪಿ.ಎಸ್ ಮೆಡಿಕಲ್ಸ್‌ಗೆ ಬಂದ ಗುಂಪೊಂದು ಗಾಜುಗಳನ್ನು ಒಡೆದು ಪುಡಿ ಮಾಡಿದೆ. ತಕ್ಷಣವೇ ಎಲ್ಲ ಔಷಧಿ ಅಂಗಡಿಗಳ ಮಾಲೀಕರು ಒಟ್ಟಾಗಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಔಷಧಿ ಅಂಗಡಿಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಔಷಧಿ ಅಂಗಡಿಗಳು ಪುನಃ ತೆರದವು.
Share:

ಅರಸೀಕೆರೆ ಬಂದ್ - Arsikere Bandh




ಅರಸೀಕೆರೆ ಬಂದ್ :-
ಅರಸೀಕೆರೆ ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಉಂಟಾಗಿರುವುದನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರು ನೀಡಿದ ಬಂದ್ ಕರೆಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯ ವ್ಯಕ್ತವಾಯಿತು. ಬೆಳಗಿನಿಂದಲೇ ಅನೇಕ ಅಂಗಡಿಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳು ಹಾಗೂ ಬ್ಯಾಂಕುಗಳು ರಜೆ ಘೋಷಿಸಿದವು.
ತಮ್ಮ ಅಪಾರ ಬೆಂಬಲಿಗರೊಂದಿಗೆ ಚೆಸ್ಕ್ ಕಛೇರಿಯಿಂದ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಛೇರಿಗೆ ತೆರಳಿದ ಶಾಸಕರು ಮಿನಿ ವಿಧಾನಸೌಧದ ಎದುರಿನಲ್ಲಿ ರಸ್ತೆ ತಡೆ ನಡೆಸಿದರು. ಕೆಲವು ನಿಮಿಷಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
Share:

ಬುಧವಾರ, ನವೆಂಬರ್ 18, 2009

ಅರಸೀಕೆರೆ ಶಾಸಕರ ಧರಣಿಗೆ ಜೊತೆಗೂಡಿದ ಹೆಚ್.ಡಿ.ರೇವಣ್ಣ


ಅರಸೀಕೆರೆ ಪಟ್ಟಣದ ವಿದ್ಯುತ್ ಕಛೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಅವರ ಬೆಂಬಲಿಗರನ್ನುದ್ದೇಶಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿದರು. ಜೆ.ಡಿ.ಎಸ್. ಮುಖಂಡರುಗಳಾದ ಜವರೇಗೌಡ, ಪಟೇಲ್ ಶಿವರಾಮ್ ಇದ್ದರು.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....