ಹನುಮ ಜಯಂತಿ
ಅರಸೀಕೆರೆ ನಗರದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಪ್ರಾಚೀನ ಆಂಜನೇಯ ಸ್ವಾಮಿಯವರ ದೇವಸ್ಥಾನದಲ್ಲಿ ಗುರುವಾರದಂದು ಹನುಮ ಜಯಂತಿಯ ಅಂಗವಾಗಿ ಪ್ರಾಥಃಕಾಲ ಶ್ರೀಯವರಿಗೆ ಅಭಿಷೇಕ ಮತ್ತು ಕುಂಕುಮಾರ್ಚನೆ ಜರುಗಿತು. ಸಂಜೆ ಆಂಜನೇಯಸ್ವಾಮಿಗೆ ವಿಶೇಷ ಅಲಂಕರ ಹಾಗೂ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಭಕ್ತರಿಗೆ ನೀಡುವ ಪ್ರಸಾದದ ಗುಣಮಟ್ಟವನ್ನು ಅರಸೀಕೆರೆ ತಾಲ್ಲೂಕು ವೈದ್ಯಾಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಶ್ರೀ ಎನ್.ವಿ.ನಟೇಶ್ ರವರು ಹನುಮ ಜಯಂತಿ ಸಿದ್ಧತೆಗಳನ್ನು ಪರಿಶೀಲಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವಿಶಂಕರನ್ ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.