ಗುರುವಾರ, ನವೆಂಬರ್ 19, 2009

ಅರಸೀಕೆರೆ ಬಂದ್ - Arsikere Bandh




ಅರಸೀಕೆರೆ ಬಂದ್ :-
ಅರಸೀಕೆರೆ ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಉಂಟಾಗಿರುವುದನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರು ನೀಡಿದ ಬಂದ್ ಕರೆಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯ ವ್ಯಕ್ತವಾಯಿತು. ಬೆಳಗಿನಿಂದಲೇ ಅನೇಕ ಅಂಗಡಿಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳು ಹಾಗೂ ಬ್ಯಾಂಕುಗಳು ರಜೆ ಘೋಷಿಸಿದವು.
ತಮ್ಮ ಅಪಾರ ಬೆಂಬಲಿಗರೊಂದಿಗೆ ಚೆಸ್ಕ್ ಕಛೇರಿಯಿಂದ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಛೇರಿಗೆ ತೆರಳಿದ ಶಾಸಕರು ಮಿನಿ ವಿಧಾನಸೌಧದ ಎದುರಿನಲ್ಲಿ ರಸ್ತೆ ತಡೆ ನಡೆಸಿದರು. ಕೆಲವು ನಿಮಿಷಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
Share:

1 ಕಾಮೆಂಟ್‌(ಗಳು) :

ಡಿ.ಎಸ್.ರಾಮಸ್ವಾಮಿ ಹೇಳಿದರು...

ಧರಣಿ ಸತ್ಯಾಗ್ರಹ ಇವೆಲ್ಲ ಈ ಕಾಲದಲ್ಲಿ ಅರ್ಥ ಕಳಕೊಂಡ ಚಲಾವಣೆಯಲ್ಲಿಲ್ಲದ ನಾಣ್ಯಗಳು.ಯಾವ ಸರ್ಕಾರವೇ ಇರಲಿ ಈ ಆಳುವ ವರ್ಗ ಮಾತ್ರ ತಮ್ಮ ಬ್ಯೂರೋಕ್ರಸಿ ಮೂಲಕ ಜನಸಾಮಾನ್ಯರನ್ನು ಗೋಳುಗುಟ್ಟಿಸುತ್ತಲೇ ಇರುತ್ತದೆ.ಶಾಸಕ ಶ್ರೀ ಶಿವಲಿಂಗೇಗೌಡರ ಹೋರಾಟಕ್ಕೆ ಭೇಷ್ ಅನ್ನಬಹುದಾದರೂ ಒಂದು ದಿನದ ಬಂದ್ ಒಟ್ಟು ಎಷ್ಟು ಮಾನವ ಗಂಟೆಗಳ ಉತ್ಪಾದಕತೆಯನ್ನು ನಾಶಮಾಡಿತು ಅಂತ ಗೊತ್ತೆ? ಈ ಊರಿನ ನಲ್ಲಿಗಳಲ್ಲಿ ಮುನಿಸಿಪಲ್ ನೀರು ಎಷ್ಟು ದಿನಕ್ಕೆ ಬರುತ್ತೆ ಅಂತಾ ನಿಮಗೂ ಗೊತ್ತು. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ? ನಮ್ಮ ಆಡಳಿತ ಇಲ್ಲದ ಕಡೆ ನಮ್ಮ ವಿರೋಧ ಇದ್ದೇ ಇರುತ್ತೆ ಅಲ್ಲವೇ? ಆದರೂ ಜನಪರ ಹೋರಾಟಗಾರರೆಲ್ಲರನ್ನೂ ನಾವು ಸಹಿಸಿಕೊಂಡಿದ್ದೇವೆ.ಯಾವ ರಾಜಕೀಯ ಪಕ್ಷ ಬಂದ್ ಕರೆ ಕೊಟ್ಟರೂ ಕಛೇರಿ ಮುಚ್ಚಿ ರಜೆಯ ಮಜ ಅನುಭವಿಸಿದ್ದೇವೆ.pathetic is our condition.Sorry this is India! ಮೇರಾ ಭಾರತ್ ಮಹಾನ್!

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....