ನೆರೆದಿದ್ದ ಸಹಸ್ರಾರು ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು. ಗ್ರಾಮಲೆಕ್ಕಿಗರಾದ ಯದುಕುಮಾರ್ ಲೋಕಶಿಕ್ಷಣ ಟ್ರಸ್ಟ್, ಕಾರ್ಯದರ್ಶಿಹೆಚ್.ಎಸ್. ನಾರಯಣಮಾರ್ತಿ,ಗ್ರಾಪಂ ಸದಸ್ಯರುಗಳು ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷರು ಸದಸ್ಯರುಗಳು ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಥಕ್ಕೆ ಹಾಗೂ ದೇವಾಲಯಕ್ಕೆ ವಿವಿಧ ಹೂಗಳಿಂದ ಶೃಂಗಾರಗೊಳಿಸಲಾಗಿತ್ತು. ಕೋಡಮ್ಮದೇವಿ ಸಮುದಾಯ ಭವನವತಿ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಗುರುವಾರ, ಏಪ್ರಿಲ್ 6, 2017
ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ ರಥೋತ್ಸವ
ಹಾರನಹಳ್ಳಿ ಗ್ರಾಮದೇವತೆ ಕೋಡಮ್ಮದೇವಿಯವರ ರಥೋತ್ಸವ ಇಂದು(ಗುರುವಾರ) ವೈಭವದಿಂದ ನಡೆಯಿತು. ಕೋಡಮ್ಮದೇವಿ ಮೂಲ ಸನ್ನಿಧಾನದಲ್ಲಿ ಶ್ರೀ ದೇವಿಯವರಿಗೆ ಜಾತ್ರಾ ಪ್ರಯುಕ್ತ ವಿಶೇಷ ಪೂಜೆ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಯಳವಾರೆ ಹುಚ್ಚಮ್ಮದೇವಿ, ಕೋಡಮ್ಮದೇವಿ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ ಉತ್ಸವವು ಕೋಡಿಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಜಾತ್ರಾ ಆವರಣದಲ್ಲಿ ಸಿಡಿಸೇವೆ ಯಲ್ಲಿ ನೂರಾರು ಮಹಿಳೆಯರು ಮಕ್ಕಳು ಸಿಡಿ ಕಂಬಸುತ್ತಿ ಪ್ರಾರ್ಥಿಸಿದರು ಉಯ್ಯಾಲೆಸೇವೆ ಧೂತರಾಯಸ್ವಾಮಿಯವರ ಕತ್ತಿಸೇವೆ ನೆರವೇರಿತು. ಕೋಡಮ್ಮದೇವಿ ಹಾಗೂ ಹುಚ್ಚಮ್ಮದೇವಿಯವರನ್ನು ರಥದಲ್ಲಿ ಕುಳ್ಳರಿಸಿ ಬಲಿಪ್ರಧಾನ ಪುಣ್ಯಾಹಃದ ನಂತರ ಚಲುವರಾಯಸ್ವಾಮಿ ವೀರಭದ್ರದೇವರು ಧೂತರಾಯಸ್ವಾಮಿ ರಥಕ್ಕೆ ಕಾಯಿ ಹೊಡೆದ ನಂತರ ಹಾರನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ರಥಕ್ಕೆ ಕಾಯಿ ಹೊಡೆದು ರಥ ಎಳೆದರು.
ನೆರೆದಿದ್ದ ಸಹಸ್ರಾರು ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು. ಗ್ರಾಮಲೆಕ್ಕಿಗರಾದ ಯದುಕುಮಾರ್ ಲೋಕಶಿಕ್ಷಣ ಟ್ರಸ್ಟ್, ಕಾರ್ಯದರ್ಶಿಹೆಚ್.ಎಸ್. ನಾರಯಣಮಾರ್ತಿ,ಗ್ರಾಪಂ ಸದಸ್ಯರುಗಳು ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷರು ಸದಸ್ಯರುಗಳು ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಥಕ್ಕೆ ಹಾಗೂ ದೇವಾಲಯಕ್ಕೆ ವಿವಿಧ ಹೂಗಳಿಂದ ಶೃಂಗಾರಗೊಳಿಸಲಾಗಿತ್ತು. ಕೋಡಮ್ಮದೇವಿ ಸಮುದಾಯ ಭವನವತಿ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ನೆರೆದಿದ್ದ ಸಹಸ್ರಾರು ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು. ಗ್ರಾಮಲೆಕ್ಕಿಗರಾದ ಯದುಕುಮಾರ್ ಲೋಕಶಿಕ್ಷಣ ಟ್ರಸ್ಟ್, ಕಾರ್ಯದರ್ಶಿಹೆಚ್.ಎಸ್. ನಾರಯಣಮಾರ್ತಿ,ಗ್ರಾಪಂ ಸದಸ್ಯರುಗಳು ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷರು ಸದಸ್ಯರುಗಳು ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಥಕ್ಕೆ ಹಾಗೂ ದೇವಾಲಯಕ್ಕೆ ವಿವಿಧ ಹೂಗಳಿಂದ ಶೃಂಗಾರಗೊಳಿಸಲಾಗಿತ್ತು. ಕೋಡಮ್ಮದೇವಿ ಸಮುದಾಯ ಭವನವತಿ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
1 ಕಾಮೆಂಟ್(ಗಳು) :
Vihangama Nota .. Graamena Sogadu
ಕಾಮೆಂಟ್ ಪೋಸ್ಟ್ ಮಾಡಿ