Arsikere :
ಭೂಮಿ ದಿನದ ಅಂಗವಾಗಿ ಶನಿವಾರದಂದು ಅರಸೀಕೆರೆ ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಸಂಸ್ಕಾರ ಭಾರತೀ ಅರಸೀಕೆರೆ ಘಟಕದ ಸಹಯೋಗದಲ್ಲಿ ಹೆಸರಾಂತ ರಂಗೋಲಿ ಕಲಾವಿದೆ ಸುನಂದಾ ಕಠಾರಿ ರವರು “ಭೂಮಿ ನಮನ” ಶೀರ್ಷಿಕೆಯಲ್ಲಿ ಸುಂದರವಾದ ಬೃಹತ್ ರಂಗೊಲಿಯನ್ನು ರಚಿಸಿದರು.
ಭೂಮಿ ದಿನದ ಹಿನ್ನೆಲೆ :-
ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಘಟನೆಯಾಗಿದೆ, ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ.
ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ 1970ರಲ್ಲಿ ಪರಿಸರಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಪರಿಸರ ಪ್ರೇಮಿಗಳು ಅಷ್ಟೇ ಅಲ್ಲ, ನಾಗರಿಕರೆಲ್ಲ ಎಚ್ಚೆತ್ತುಕೊಂಡು ಈ ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲ ಎಂದರಿತುಕೊಂಡರು. ಆಗ ಸರ್ಕಾರ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ, ಜಾರಿಗೂ ತಂದಿತು. ಈ ಹೋರಾಟದ ಫಲವೇ ಭೂಮಿ ದಿನ. ಈ ಚಳವಳಿಗೆ ಸರ್ಕಾರ ಮನ್ನಣೆ ನೀಡಿ ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನವಾಗಿ ಆಚರಣೆ ಮಾಡಲಾಗುತ್ತದೆ.
ಈ ಭೂಮಿ ದಿನ ನಂತರದ ದಿನಗಳಲ್ಲಿ, ವರ್ಷಗಳಲ್ಲಿ ವಿಶ್ವದಾದ್ಯಂತ ವಿಸ್ತಾರವಾಯಿತು. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಸೃಷ್ಟಿಯಾದವು. ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಕೈಜೋಡಿಸಿದವು. ಕೆಲವು ಕಂಪನಿಗಳು ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯ (ಸಿಎಸ್‌ಆರ್) ಮೂಲಕವೂ ಕಾರ್ಯಕ್ರಮಗಳನ್ನು ಆಯೋಜಿಸಿದವು. ಪ್ರತಿಯೊಂದು ವರ್ಷಕ್ಕೂ ಒಂದು ಥೀಮ್ ನೀಡಲಾಯಿತು. ಅದರಂತೆ ಭೂಮಿ ರಕ್ಷಣೆಯಲ್ಲಿ, ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಹಸಿರು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
(ಚಿತ್ರ : ರಂಗನಾಥ ಹೆಬ್ಬಾರ್, ಸೂರ್ಯ ಸ್ಟೂಡಿಯೋ)
(ಭೂಮಿದಿನದ ಬಗ್ಗೆ ಮಾಹಿತಿ : ವಿಕಿಪೀಡಿಯಾ)
ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ |
ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ |
ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ