ಹಾರನಹಳ್ಳಿ: ಅರಸೀಕೆರೆ ಹಾಸನ
ರಾಜ್ಯ ರಸ್ತೆ ಹಾರನಹಳ್ಳಿ ಯಿಂದ ಗ್ರಾಮದ
ಚನ್ನಕೇಶವ ದೇವಾಲಯಕ್ಕೆ ಹೋಗುವ ಮುಖ್ಯ ರಸ್ತೆ ಹಾಗೂ ಮಸೀದಿಗೆ ಹೋಗುವ ಮುಖ್ಯ ರಸ್ತೆ
ಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲೀಂಗೇಗೌಡ ಭೂಮಿ ಪೂಜೆ
ಸಲ್ಲಿಸಿದರು ನಂತರ ಮಾತನಾಡಿ ಲೋಕೋಪಯೋಗಿ ಇಲಾಖೆಯಿಂದ ಕೊಡುರಸ್ತೆ ಹಾಗೂ ಚರಂಡಿ ಮಾಡಿಸಲು 50 ಲಕ್ಷ ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ತಿಳಿಸಿದರು. ಹಾರನಹಳ್ಳಿ ದೊಡ್ಡ ಗ್ರಾಮವಾಗಿದ್ದು ಸುಮಾರು 1ಕೋಟಿಗಿಂತ ಹೆಚ್ಚು ಅನುದಾನ ಹಾರನಹಳ್ಳಿ ಸಮಗ್ರ ಅಭಿವೃದ್ದಿಗೆ
ನೀಡಿರುವುದಾಗಿ ತಿಳಿಸಿದರು.
ಹಾರನಹಳ್ಳಿ ಸೋಮೇಶ್ವರ ದೇವಾಲಯ, ಕೋಟೆ ದುರಸ್ತಿ
ಬಗ್ಗೆ ಪ್ರಾಚ್ಯ ವಸ್ತು ಇಲಾಖೆಗೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಮುಂದಿನ ವರ್ಷ ಶ್ರವಣಬೆಳಗೂಳ ಮಸ್ತಕಾಭಿಷೇಕ
ಇರುವುದರಿಂದ ತಾಲ್ಲೂಕಿನ ಪ್ರವಾಸಿ ಸ್ಥಳ, ಮೂಲಭೂತ ಸೌಕರ್ಯ
ನಾಮಫಲಕ ಹೀಗೆ ಅನೇಕ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಮನವಿ
ಸಲ್ಲಿಸಲಾಗಿದೆ ಎಂದರು ಈ ಸಂದರ್ಭದಲ್ಲಿ ಗ್ರಾಮ
ಪಂಚಾಯತಿ ಸದಸ್ಯರಾದ ಅಪ್ಸರ್,ಹಿರಿಯಣ್ಣ,
ಪಿಡಿಓ ರವಿ, ಧರ್ಮಣ್ಣ, ನಾಗರಾಜು ರಾಜಣ್ಣ,ಜಗದೀಶ್,ಪ್ರಕಾಶ್, ಕೆಲವು ಇಲಾಖೆ
ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದರು.
(ಚಿತ್ರ - ವರದಿ : ಹಾರನಹಳ್ಳಿ
ಚಿನ್ಮಯ್)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ