ಗುರುವಾರ, ಏಪ್ರಿಲ್ 20, 2017

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸ


ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಸಮೀಪದ ಯಳವಾರೆ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿಯವರ ಜಾತ್ರ ಮಹೋತ್ಸವು ಇಂದು ಬೆಳಿಗ್ಗೆ ವೈಭವದಿಂದ ನೆಡಯಿತು.  ಶ್ರೀ ಹುಚ್ಚಮ್ಮ ದೇವಿಯವರ ಮೂಲ ಸನ್ನಿದಾನದಲ್ಲಿ ಬುವಾರ ತಡರಾತ್ರಿ ನೂರಾರು ಮಹಿಳೆಯರು ಗುಗ್ಗಳಸೇವೆಯಲ್ಲಿ ಪಾಲ್ಗೊಂಡಿದ್ದರು. ಗಂಗಾಸ್ನಾನ, ಕೋಗಲ್ ಸೇವೆ ಮಂಗಳಾರತಿ ನೆಡಯಿತು. ಗುರುವಾರ ಬೆಳಿಗ್ಗೆ ಹುಚ್ಚಮ್ಮದೇವಿ, ಕೋಡಮ್ಮದೇವಿಯವರ ಸಿಡಿಸೇವೆಯಲ್ಲಿ ನೂರಾರು ಮಕ್ಕಳು ಹಾಗೂ ಹರಕೆ ಹೊತ್ತವರು ದೇವರ ಜೊತೆಯಲ್ಲಿ  ಸಿಡಿಕಂಬ ಸುತ್ತಿದ್ದರು.   ಜೇನುಕಲ್ಲು  ಸಿದ್ದೇಶ್ವರ ಸ್ವಾಮಿಯ ಸಣ್ಣ ರಥಕ್ಕೆ ಹೂವಿನಿಂದ ಶೃಂಗಾರವನ್ನು ಮಾಡಲಾಗಿತ್ತು.  ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಿ ನೂರಾರು ಭಕ್ತರು ಅಜ್ಜಯ್ಯನ  ರಥವನ್ನು ಎಳೆದರು.

ನಂತರ ಚಲುವರಾಯ ಸ್ವಾಮಿಯವರ ಬೆಳ್ಳಿಕತ್ತಿ ಸೇವೆ ನೊಡಲು ನೂರಾರು ಭಕ್ತಾದಿಗಳು ಸೇರಿದರು. ಕತ್ತಿಸೇವೆ ನೆಡೆದ ನಂತರ ಹಚ್ಚಮ್ಮದೇವಿ ಮಹಾರಥೋತವಕ್ಕೆ ಚಾಲನೆ ನೀಡಲಾಯಿತು. ರಥದಲ್ಲಿ ಶ್ರೀ ಕೋಡಮ್ಮದೇವಿ, ಹುಚ್ಚಮ್ಮದೇವಿಯವರಿಗೆ ಪೂಜೆ ನೆಡೆದನಂತರ ಸಾವಿರಾರು ಭಕ್ತಾದಿಗಳು ದೇವಿಯ ನಾಮಸ್ಮರಣೆಯಲ್ಲಿ ರಥವನ್ನು ಎಳೆದರು. ಭಕ್ತರು ಬಾಳೆಹಣ್ಣು, ಹೂವುಗಳನ್ನುರಥಕ್ಕೆಎಸೆದು ಭಕ್ತಿಭಾವ ಸಮರ್ಪಿಸಿದರು. ರಥಕ್ಕೆ ಹೂವಿನಿಂದ ಶೃಂಗರಿಸಲಾಗಿತು.

ಹುಚ್ಚಮ್ಮದೇವಿ ಮೂಲ ಸನ್ನಿಧಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತು ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಅರೆವಾದ್ಯ, ರಡೆವಾದ್ಯ, ಕಹಳೆವಾದನ, ದೋಣ್ಣುವಾದ್ಯಕ್ಕೆ ತಕ್ಕಂತೆ ಸೋಮನಕುಣಿತ ಆಕರ್ಷಣೆಯಾಗಿತು. ಹಾರನಹಳ್ಳಿ, ಎರೆಹಳ್ಳಿ, ಬೋರನಕೊಪ್ಪಲು, ಬ್ಬೂರಹಳ್ಳಿ, ಣ್ಣಾಯ್ಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಪಾಲ್ಗೊಂಡಿದರು. ಬಿಸಿಲಿನ ದಗೆ ತಡೆಯಲಾರದೆ ಜಾತ್ರೆಗೆ ಬಂದ ಭಕ್ತಾಧಿಗಳು ಜೂಸ್, ಕಬ್ಬಿನಹಾಲು, ತಂಪಾದ ಪಾನೀಯ ಮೊರೆ ಹೋದರು. ಪುರಿ ಭತ್ತಾಸು ವ್ಯಾಪಾರ ಜೋರಾಗಿತು ಜನಪ್ರತಿನಿಧಿಗಳು ಸೇರಿದಂತೆ ಹಲವರು ಈ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.


(ಚಿತ್ರ/ಮಾಹಿತಿ : ಹಾರನಹಳ್ಳಿ ಚಿನ್ಮಯ್)

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಜೇನುಕಲ್ಲು ಸಿದ್ದೇಶ್ವರ ರಥ

ಹುಚ್ಚಮ್ಮದೇವಿ ಮೂಲ ಸನ್ನಿಧಾನ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....