ಶುಕ್ರವಾರ, ಏಪ್ರಿಲ್ 7, 2017

ಅರಸೀಕೆರೆ : ಹೊಂಗ್ಯಮ್ಮದೇವಿ, ಹೋತನಕಲ್ಲಮ್ಮ ದೇವಿಯವರ ಜಾತ್ರೆ

ಅರಸೀಕೆರೆ ತಾಲ್ಲೂಕಿನ ಭೈರಾಂಬುದಿ ಗ್ರಾಮ ದೇವತೆ ಹೊಂಗ್ಯಮ್ಮ ದೇವಿ ಮತ್ತು ಮಲಿಗಮ್ಮ ದೇವಿ ರಥೋತ್ಸವ ಶುಕ್ರವಾರ ಬೆಳಿಗ್ಗೆ ಆಪಾರ ಭಕ್ತರ ಸಡಗರ ಸಂಭ್ರಮ ದ ನಡುವೆ ವಿಜೃಂಭಣೆಯಿಂದ ಜರುಗಿತು.

ಹೊಂಗ್ಯಮ್ಮದೇವಿ ಹಾಗೂ ಮಲಿಗಮ್ಮದೇವಿ ಉತ್ಸವ ಮೂರ್ತಿಗಳನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕೂರಿಸಿ ಹಿರಿಯೂರು ಗ್ರಾಮದ ಹಾಲು ಸಿದ್ದೇಶ್ವರ ಸ್ವಾಮಿ, ಚಲುವರಾಯಸ್ವಾಮಿ, ಧೂತರಾಯ ಸ್ವಾಮಿ ಸಮ್ಮುಖದಲ್ಲಿ ಮಂಗಲ ಕರಡೇವು ವಾದ್ಯದೊಂದಿಗೆ ನೂರಾರು ಭಕ್ತರ ನಡುವೆ ರಥ ಮಂಟಪಕ್ಕೆ ಕರೆ ತರಲಾಯಿತು. . ನಂತರ  ಪೂಜೆ ಸಲ್ಲಿಸಿ ರಥದ ಗಾಲಿಗಳಿಗೆ  ತೆಂಗಿನ ಕಾಯಿ ಒಡೆದು ಮಹಾ ಮಂಗಳಾರತಿ ಸಲ್ಲಿಸುತ್ತಿದ್ದಂತೆ ನೆರದಿದ್ದ ಜನರು ರಥದ ಹಗ್ಗ ಹಿಡಿದು ಜಯಘೋಷ ಹಾಕುತ್ತಾ ಮುಂದಕ್ಕೆ ಎಳೆದರು.  ರಥ ಮುಂದಕ್ಕೆ ಚಲಿಸುತ್ತಿದ್ದಂತೆ ಭಕ್ತರು ರಥದ ಕಲಶಕ್ಕೆ ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು

(ಮಾಹಿತಿ : ಮಾಡಾಳು ನಂದೀಶ)
(ಚಿತ್ರ : ಬಾಣಾವರ ಸತೀಶ್)

ಅರಸೀಕೆರೆ ತಾಲ್ಲೂಕಿನ ಭೈರಾಂಬುದಿ ಗ್ರಾಮ ದೇವತೆ ಹೊಂಗ್ಯಮ್ಮ ದೇವಿ ಮತ್ತು ಮಲಿಗಮ್ಮ ದೇವಿ ರಥೋತ್ಸವ


ಅರಸೀಕೆರೆ ತಾಲ್ಲೂಕು ದೇಶಾಣಿ ಗ್ರಾಮದಲ್ಲಿಂದು ಹೋತನಕಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವವು ಭಕ್ತ ಜನಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.
(ಚಿತ್ರ : ಪ್ರಸನ್ನಕುಮಾರ)

ಅರಸೀಕೆರೆ ತಾಲ್ಲೂಕು ದೇಶಾಣಿ ಗ್ರಾಮದಲ್ಲಿಂದು ಹೋತನಕಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವ


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....