ಬುಧವಾರ, ಏಪ್ರಿಲ್ 12, 2017

ಭಕ್ತ ಜನಸಾಗರದ ನಡುವೆ ಜರುಗಿದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವ

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಾದಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವವು ಇಂದು (12-04-2017) 7 ರಿಂದ 8 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ, ಭಕ್ತ ಜನಸಾಗರದ ಜಯಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.

ಇಂದು ಬೆಳಿಗ್ಗೆ 6 ರಿಂದ 7 ರವರಗೆ ಶ್ರೀ ಸ್ವಾಮಿಯವರ ದೇವಾಲಯದಲ್ಲಿ ಮಹಾಮಂಗಳಾರತಿ ನಡೆಯಿತು. ನಂತರ ಯಳವಾರೆ ಚಲುವರಾಯ ಸ್ವಾಮಿಯವರ ನೇತೃತ್ವದಲ್ಲಿ ಶ್ರೀಯವರ ಉತ್ಸವ ಮೂರ್ತಿಯನ್ನು  ಬೆಳ್ಳಿಪಲ್ಲಕ್ಕಿಯಲ್ಲಿಟ್ಟು ನಡೆಮುಡಿ ಹಾಸಿ ರಥದಬಳಿ ಕರೆತರಲಾಯಿತು.  ಚಲುವರಾಯಸ್ವಾಮಿಯು ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದ ನಂತರ ಶ್ರೀಯವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.  ಬೆಳಿಗ್ಗೆ 7.40 ರ ಸಮಯದಲ್ಲಿ ಭಕ್ತರು ಜಯಘೋಷಗಳನ್ನು ಮೊಳಗುತ್ತಾ ರಥವನ್ನು ಎಳೆದು ಧನ್ಯರಾದರು. ರಥದ ಮುಂದೆ ನಿರ್ಮಿಸಿದ್ದ ಕೆಂಡದ ಚೌಕಿಯಲ್ಲಿ ಭಕ್ತರು ತಮ್ಮ ತಮ್ಮ ಹರಕೆಯನ್ನು ತೀರಿಸುವ ಸಲುವಾಗಿ ಕೆಂಡ ಹಾಯ್ದರು. ಜಾತ್ರೆಗೆ ಆಗಮಿಸಿದ್ದ ಎಲ್ಲ ಭಕ್ತಾಧಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.  ಜಾತೆಯಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆಗಳಾಗದಂತೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.

ಅರಸೀಕೆರೆ ಯಾದಾಪುರ ಗ್ರಾಮದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವ 

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....