Arsikere :
ಅರಸೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಬೆಳಗ್ಗೆ 11 ಗಂಟೆಯ ನಂತರ ಹೊರಗೆ ಓಡಾಡಲೂ ಕಷ್ಟವಾಗುವಷ್ಟು ಬಿಸಿಲಿನ ಝಳ ಮುಖಕ್ಕೆ ರಾಚುತ್ತಿದೆ. ಈ ಬಿಸಿಲ ಝಳ ಪ್ರಾಣಿ ಪಕ್ಷಿಗಳನ್ನೂ ಹೈರಾಣಾಗುವಂತೆ ಮಾಡಿದೆ. ಇಂದು ಮಧ್ಯಾನ್ಹ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ನಗರಸಭೆಯ ನೀರು ಸರಬರಾಜು ಕಚೇರಿಯ ಮುಂಭಾಗದಲ್ಲಿ, ಖಾಸಗಿ ಮಠಕ್ಕೆ ಸೇರಿದ ಹೆಣ್ಣಾನೆಯೊಂದು ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಸಾರ್ವಜನಿಕರ ಉಪಯೋಗಕ್ಕೆ ಅಳವಡಿಸಿರುವ ನಲ್ಲಿ ನೀರನ್ನು ಮೈಮೇಲೆ ಸುರಿದುಕೊಂಡಿತು. ಪಟ್ಟಣಗಳಲ್ಲೇ ಸಾಕುಪ್ರಾಣಿಗಳಿಗೆ ಈ ಪರಿಸ್ಥಿತಿಯಾಗಿರುವಾಗ, ಇನ್ನು ಈ ಬೇಸಿಗೆಯ ಬರದಲ್ಲಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು.ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ |
ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ |
ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ