(ಚಿತ್ರ/ಮಾಹಿತಿ : ಮಾಡಾಳು ನಂದೀಶ)
ಬುಧವಾರ, ಏಪ್ರಿಲ್ 19, 2017
Home
»
»
ಇಂಗು ಗುಂಡಿಗೆ ಬಿದ್ದಿದ್ದ ಹಸುವಿನ ರಕ್ಷಣೆ
ಇಂಗು ಗುಂಡಿಗೆ ಬಿದ್ದಿದ್ದ ಹಸುವಿನ ರಕ್ಷಣೆ
ಅರಸೀಕೆರೆ ತಾಲ್ಲೂಕು ದೊಡ್ಡಮೇಟಿಕುರ್ಕೆ ಗ್ರಾಮದ ಹೊರವಲಯದಲ್ಲಿರುವ ತೋಟವೊಂದರಲ್ಲಿ, ವೇದಾವತಿ ನದಿ ಪುನಶ್ಚೇತನ 2ನೇ ಹಂತದ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ 15 x 3 ಅಡಿ ಆಳದ ಮಳೆನೀರು ಇಂಗು ಗುಂಡಿಗೆ ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ಹಸುವೊಂದು ಕಾಲುಜಾರಿ ಬಿದ್ದಿತ್ತು. ಸ್ಥಳೀಯ ಗ್ರಾಮಸ್ಥರು ಜೆಸಿಬಿ ಯಂತ್ರ ಬಳಸಿ 4 ಗಂಟೆಗೂ ಅಧಿಕ ಸಮಯ ಹರಸಾಹಸ ಪಟ್ಟು, ಇಂಗು ಗುಂಡಿಗೆ ನಿರ್ಮಿಸಿದ್ದ ಸಿಮೆಂಟ್ ರಿಂಗುಗಳನ್ನು ಬೇರ್ಪಡಿಸಿ, ಗುಂಡಿಗೆ ಬಿದ್ದಿದ್ದ ಹಸುವನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದರು. ಹಸುವಿಗೆ ಸಣ್ಣಪುಟ್ಟ ಗಾಯವಾಗಿದ್ದು ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದೆ.
(ಚಿತ್ರ/ಮಾಹಿತಿ : ಮಾಡಾಳು ನಂದೀಶ)
(ಚಿತ್ರ/ಮಾಹಿತಿ : ಮಾಡಾಳು ನಂದೀಶ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ