ಗುರುವಾರ, ಏಪ್ರಿಲ್ 20, 2017

ಅರಸೀಕೆರೆಯಲ್ಲಿ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಜ್ಯೋತಿ ರಥಯಾತ್ರೆ

ಅರಸೀಕೆರೆಯಲ್ಲಿ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಜ್ಯೋತಿ ರಥಯಾತ್ರೆ


ಹಾಸನ ಜಿಲ್ಲೆ ಅರಸೀಕೆರೆ ನಗರಕ್ಕೆ ಭಗವದ್ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಶ್ರೀ ರಾಮಾನುಜ ಜ್ಯೋತಿ ಭಕ್ತಿರಥಯಾತ್ರೆಯು ಇಂದು (ದಿನಾಂಕ 20-04-2017ನೇ ಗುರುವಾರ) ಸಂಜೆ ಆಗಮಿಸಿತು.  ರಥಯಾತ್ರೆಯೊಂದಿಗೆ ಶ್ರೀ ಯದುಗಿರಿ ಯತಿರಾಜ ಮಠ, ಮೇಲುಕೋಟೆಯ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳು ಆಗಮಿಸಿದ್ದರು. ಶ್ರೀ ಲಕ್ಷ್ಮೀನರಸಿಂಹ ಕ್ಷೇತ್ರ ಅರಸೀಕೆರೆಯ ಪರಂಪರ ಅವಧೂತ ಸದ್ಗುರು ಶ್ರೀ ಸತೀಶ್ ಶರ್ಮಾಜಿ ಮಹಾರಾಜ್ ರವರುಗಳ  ದಿವ್ಯ ಸಾನಿಧ್ಯದಲ್ಲಿ  ಅರಸೀಕೆರೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.  ನಂತರ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಿತು.








Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....