ಅರಸೀಕೆರೆ ದೊಡ್ಡಕೆರೆಯ ಒಡಲು ಬರಿದಾಗಲು ಕ್ಷಣಗಣನೆ
ಈಗಿನ್ನೂ ಫೆಬ್ರವರಿ ತಿಂಗಳು, ನಮ್ಮ ಅರಸೀಕೆರೆ ದೊಡ್ಡಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರು ಬಿಸಿಲಿನ ಝಳಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿದೆ. ಬಹುಶಃ ಇನ್ನೊಂದು ಹದಿನೈದು ದಿನಗಳಲ್ಲಿ ನಮ್ಮ ಕೆರೆಯಲ್ಲಿರುವ ನೀರು ಖಾಲಿಯಾಗಿ, ಕೆರೆಯ ಒಡಲು ಸಂಪೂರ್ಣ ಬರಿದಾಗಲಿದೆ. ಶಿವರಾತ್ರಿಯಿಂದ ನಿಜವಾದ ಬೇಸಿಗೆ ಶುರುವಾಗುತ್ತದೆ, ಅಂದರೆ ಮುಂದಿನ ದಿನಗಳು ಹೇಗಿರುತ್ತೆಂದು ಊಹಿಸಬಹುದು.
ಕೇವಲ ಹದಿನೈದು ದಿನಗಳ ಅಂತರದಲ್ಲಿ ನಮ್ಮೂರ ಕೆರೆಯ ನೀರು ಇಂಗಿಹೋದ ಹಂತಗಳನ್ನು ಮತ್ತು ಕೆರೆಯ ಭೂಮಿಯು ಬಾಯ್ತೆರೆದಿರುವುದನ್ನು ಈ ಚಿತ್ರಗಳಲ್ಲಿ ನೋಡಬಹುದು.
ಇಂತಹ ಸಂದರ್ಭದಲ್ಲೂ, ನಮ್ಮ ಅರಸೀಕೆರೆ ಪಟ್ಟಣದ ಮನೆಮನೆಗಳಿಗೆ ಹೇಮಾವತಿಯ ಶುದ್ಧ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಸರಬರಾಜಾಗುತ್ತಿದೆ, ಒಂದೊಂದು ಹನಿ ನೀರನ್ನೂ ಉಳಿಸುವುದು ನಮ್ಮಗಳ ಕರ್ತವ್ಯ. ದಯವಿಟ್ಟು ನೀರನ್ನು ಪೋಲು ಮಾಡಬೇಡಿ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ