ನಡೆದಾಡುವ ದೇವರು, ನಾಡಿನ ವಿವಿಧ ಕೋಮಿನ ಲಕ್ಷಾಂತರ ದೀನ ದಲಿತ ಬಡ ಅನಾಥ ಮಕ್ಕಳ ಬಾಳಿನ ಭಾಗ್ಯದೇವತೆ, ಪರಮಪೂಜ್ಯ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಡಾ|| ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 109 ಸಂವತ್ಸರಗಳನ್ನು ಸಂಪನ್ನಗೊಳಿಸಿ ದಿನಾಂಕ 01-04-2017ಕ್ಕೆ 110ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು, ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡ ಸಿಂಗರಿಸಿದ ರಥ ಸಂಚರಿಸುತ್ತಿದೆ.
ಇಂದು ಸಂಜೆ 8 ಗಂಟೆಗೆ ಅರಸೀಕೆರೆ ಪಟ್ಟಣಕ್ಕೆ ಶ್ರೀಯವರ ರಥ ಆಗಮಿಸಿತು. ವಿವಿಧ ಸಮಾಜದ ಗಣ್ಯರು, ಶರಣರು ರಥಕ್ಕೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
ಇಂದು ಸಂಜೆ 8 ಗಂಟೆಗೆ ಅರಸೀಕೆರೆ ಪಟ್ಟಣಕ್ಕೆ ಶ್ರೀಯವರ ರಥ ಆಗಮಿಸಿತು. ವಿವಿಧ ಸಮಾಜದ ಗಣ್ಯರು, ಶರಣರು ರಥಕ್ಕೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ