ತಮ್ಮೆಲ್ಲರ ಪ್ರೋತ್ಸಾಹ, ಸಲಹೆ, ಸೂಚನೆಗಳಿಂದ ಅರಸೀಕೆರೆ.in ದಿನದಿಂದ ದಿನಕ್ಕೆ ತನ್ನ ಓದುಗರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕೇವಲ ನಮ್ಮ ರಾಜ್ಯ ಹಾಗೂ ದೇಶದಿಂದಷ್ಟೇ ಅಲ್ಲ, ವಿದೇಶಗಳಿಂದಲೂ ನಮ್ಮ ವೆಬ್ ಸೈಟ್ ಗೆ ಪ್ರತಿದಿನ ಓದುಗರು ಭೇಟಿ ನೀಡುತ್ತಿದ್ದಾರೆ.
"ಯುಗಾದಿ" ನಮಗೆ ಹೊಸ ವರ್ಷ. ಆ ದಿನದಿಂದ ಹೊಸ ಸಂವತ್ಸರದ ಪ್ರಾರಂಭವಾಗುತ್ತದೆ. ಈ ಹೊಸ ವರ್ಷದ ಆಚರಣೆಗಾಗಿ ಅರಸೀಕೆರೆ.in ವೆಬ್ ಸೈಟಿನಲ್ಲಿ ಕೆಲವೊಂದು ನೂತನ ಅಂಕಣಗಳನ್ನು ಪ್ರಾರಂಭಿಸಲಿದ್ದೇವೆ.
ನಮ್ಮೆಲ್ಲರಲ್ಲೂ ಒಂದೊಂದು ವಿಶೇಷವಾದ ಪ್ರತಿಭೆ, ಅಭಿರುಚಿ, ಹವ್ಯಾಸಗಳಿರುತ್ತವೆ. ಆದರೆ ಅವುಗಳನ್ನು ಪ್ರಕಟಿಸಲು ಸೂಕ್ತ ವೇದಿಕೆ ದೊರೆಯದೇ ಎಲೆಮರೆ ಕಾಯಿಯಂತಾಗುತ್ತೇವೆ. ಅರಸೀಕೆರೆ.in ಇಂತಹ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಇನ್ನು ಮುಂದೆ ನೀವೂ ಕೂಡ ನಿಮ್ಮ ಬರಹಗಳನ್ನು, ಚಿಂತನೆಗಳನ್ನು, ಕಥೆ, ಕಾವ್ಯಗಳನ್ನು, ಹೊಸ ರುಚಿ ಅಡುಗೆಗಳನ್ನು, ಚಲನಚಿತ್ರ ವಿಮರ್ಶೆ, ಅರಸೀಕೆರೆಗೆ ಸಂಬಂಧಿಸಿದ ಸಾರ್ವಜನಿಕ ಕುಂದು-ಕೊರತೆ, ನಮ್ಮ ತಾಲ್ಲೂಕಿನಲ್ಲಿ ಜರುಗುರುವ ಜಾತ್ರೆ, ಉತ್ಸವ, ಕಾರ್ಯಕ್ರಮಗಳ ಮಾಹಿತಿ ಹಾಗೂ ವಿಶೇಷವಾದ ಛಾಯಾಚಿತ್ರಗಳನ್ನು ಅರಸೀಕೆರೆ.in ನಲ್ಲಿ ಪ್ರಕಟಿಸಬಹುದು.
ನಿಮ್ಮ ಲೇಖನ /ಚಿತ್ರಗಳನ್ನು arsikere.in@gmail.com ವಿಳಾಸಕ್ಕೆ ಈಮೇಲ್ ಮುಖಾಂತರ ಕಳಿಸಬೇಕು. ತಾವು ಕಳಿಸುವ ವಿಷಯಗಳು/ಚಿತ್ರಗಳು ಖಡ್ಡಾಯವಾಗಿ ಸ್ವಂತದ್ದಾಗಿರಬೇಕು. ಇಂಟರ್ನೆಟ್ಟಿನಲ್ಲಿ ದೊರೆಯುವ, ವ್ಯಾಟ್ಸಪ್, ಫೇಸ್ ಬುಕ್ಕಿನಲ್ಲಿ ಬೇರೆಯವರು ಶೇರ್ ಮಾಡಿರುವ ಮಾಹಿತಿಗಳನ್ನು, ಫೋಟೋಶಾಪ್ ತಂತ್ರಜ್ಞಾನ ಬಳಸಿ ತಿದ್ದುಪಡಿ ಮಾಡಿರುವ ಚಿತ್ರಗಳು ಹಾಗೂ ಕೃತಿಚೌರ್ಯದ ಲೇಖನಗಳನ್ನು ಪ್ರಕಟಿಸುವುದಿಲ್ಲ. ಯಾವುದೇ ವಿವಾದಾತ್ಮಕವಾದ, ಪ್ರಕಟಿಸಲು ಯೋಗ್ಯವಿಲ್ಲದಂತಹ ವಿಷಯಗಳನ್ನು, ಚಿತ್ರಗಳನ್ನು ಸ್ವೀಕರಿಸುವುದಿಲ್ಲ. ನೀವು ಕಳಿಸುವ ಮಾಹಿತಿಯನ್ನು ಪ್ರಕಟಿಸುವ ಅಥವಾ ತಿರಸ್ಕರಿಸುವ ಹಕ್ಕು ಅರಸೀಕೆರೆ.in ನದ್ದಾಗಿರುತ್ತದೆ. ಲೇಖನಗಳು / ಚಿತ್ರಗಳು ತಮ್ಮ ಹೆಸರಿನಿಂದಲೇ ಪ್ರಕಟಿಸಲಾಗುತ್ತದೆ ಹಾಗೂ ಇದಕ್ಕೆ ಯಾವುದೇ ಸಂಭಾವನೆ ಇರುವುದಿಲ್ಲ. ಚಿತ್ರಗಳ ಮೇಲೆ ಅರಸೀಕೆರೆ.in ಲೋಗೋ ಪ್ರಕಟಿಸಲಾಗುವುದು.
ಬನ್ನಿ, ನಮ್ಮ ಅರಸೀಕೆರೆಯ ಸುದ್ದಿ ಸಮಾಚಾರಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಲು ಕೈಜೋಡಿಸೋಣ.
ವಂದನೆಗಳು
ಅರಸೀಕೆರೆ.in
www.arsikere.in
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ