ಮಂಗಳವಾರ, ಮಾರ್ಚ್ 7, 2017

ಪ್ರಚಾರವೂ ಒಂದು ಕಲೆ

ನಾವು ಯಾವುದೇ ಕೆಲಸಕಾರ್ಯ, ಸಾಧನೆ ಮೊದಲಾದುವುಗಳನ್ನು ಮಾಡಿದರೂ ಅದಕ್ಕೆ ತಕ್ಕ ಪ್ರಚಾರ ಸಿಗದಿದ್ದರೆ ಆ ಸಾಧನೆ ಎಲೆಮರೆ ಕಾಯಿಯಂತೆ ಆಗುತ್ತದೆ.  ಇದಕ್ಕೊಂದು ನಿದರ್ಶನ ಇಲ್ಲಿದೆ.

ನಾಲ್ಕೈದು ವರ್ಷಗಳ ಹಿಂದೆ ಅರವಿಂದ ಕೇಜ್ರೀವಾಲ್ ಎಂಬ ಹೆಸರನ್ನು ಬಹುಶಃ ಯಾರೂ ಕೇಳಿರಲಿಲ್ಲ.  ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಬೆಳಕಿಗೆ ಬಂದ ಕೇಜ್ರೀವಾಲ್, ನಂತರದ ದಿನಗಳಲ್ಲಿ ತಮ್ಮ ಹುಚ್ಚಾಟಗಳಿಂದಲೇ ಪ್ರಸಿದ್ಧಿಗೆ ಬಂದು, ದೆಹಲಿಯ ಮುಖ್ಯಮಂತ್ರಿ ಕೂಡ ಆಗಿಬಿಟ್ಟರು.  ಇಂದಿಗೂ ಕೂಡ ಅವರು ಮಾಡುವ ಸಣ್ಣಪುಟ್ಟ ಕೆಲಸಗಳೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಪ್ರಚಾರ ನೀಡುತ್ತಾರೆ.

ಇದಕ್ಕೆ ಇತ್ತೀಚಿನ ನಿದರ್ಶನ, ದೆಹಲಿಯಲ್ಲಿ 24x7 ಶುದ್ಧ ಕುಡಿಯುವ ನೀರಿನ ಯೋಜನೆ.  ಮೊನ್ನೆ ಅಂದರೆ ಮಾರ್ಚಿ 5 ನೇ ತಾರೀಖು ಈ ಪೈಲೆಟ್ ಪ್ರಾಜಕ್ಟ್ ಗೆ ಚಾಲನೆ ನೀಡಲಾಗಿದೆ ಅಷ್ಟೆ....  ಈ ಯೋಜನೆಯ ಪ್ರಚಾರ ಎಷ್ಟು ಜೋರಾಗಿ ನಡೆಯುತ್ತಿದೆ ಎಂದರೆ, ಪ್ರಪಂಚದಲ್ಲೇ ಇಂತಹ ಯೋಜನೆ ಇನ್ನೆಲ್ಲಿಯೂ ಇಲ್ಲವೆಂಬಂತೆ ಬಿಂಬಿಸುತ್ತಿದ್ದಾರೆ.

ಎಂತಹ ವಿಪರ್ಯಾಸ ನೋಡಿ,  ಬರದಿಂದ ಕಂಗೆಟ್ಟಿರುವ ಅರಸೀಕೆರೆಯಂತಹ ಪಟ್ಟಣಕ್ಕೆ ಸುಮಾರು 70 ಕಿಮೀ ದೂರದಲ್ಲಿರುವ ಘನ್ನಿಗಡದಲ್ಲಿ ಹರಿಯುವ ಹೇಮಾವತಿ ನೀರನ್ನು ಬೃಹತ್ ಪಂಪ್ ಗಳ ಮೂಲಕ ಗಂಡಸಿ ಬಳಿ ನಿರ್ಮಿಸಿರುವ ಸಂಗ್ರಹಾಗಾರಕ್ಕೆ ತುಂಬಿಸಿ, ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ ಅರಸೀಕೆರೆಗೆ ತಂದು, ಇಲ್ಲಿ ಅತ್ಯಾಧುನಿಯ ಆರ್.ಓ ಯಂತ್ರಗಳಿಂದ ಶುದ್ಧೀಕರಿಸಿ ಮನೆ ಮನೆಗಳಿಗೆ ತಲುಪಿಸುವ ಯೋಜನೆ ಬಹುತೇಕ ಪೂರ್ಣಗೊಂಡು, ಮುಖ್ಯಮಂತ್ರಿಗಳಿಂದ ಅಧಿಕೃತವಾಗಿ ಚಾಲನೆ ಕೂಡ ಆಗಿಹೋಗಿದೆ.  ನಮ್ಮೂರಿನ ಕೆಲವು ಬಡಾವಣೆಯ ಜನ ಆರೇಳು ತಿಂಗಳಿಂದಲೇ ಈ ಶುದ್ಧ ನೀರನ್ನು ಪಡೆಯುತ್ತಿದ್ದಾರೆ.

ಆದರೆ, ನಮ್ಮೂರಿನ ಈ ಯೋಜನೆಗೆ, ಶಾಸಕರು ಹಾಗೂ ಜನಪ್ರತಿನಿಧಿಗಳು ಪಟ್ಟ ಪರಿಶ್ರಮಕ್ಕೆ ಎಷ್ಟು ಪ್ರಚಾರ ದೊರೆಯಿತು..?   ದೇಶದ ರಾಜಧಾನಿ ದೆಹೆಲಿಯಂತಹ  ಮಹಾನಗರಕ್ಕಿಂತ ಮೊದಲೇ ನಮ್ಮಲ್ಲಿ ಈ ಯೋಜನೆ ಜಾರಿಯಾದರೂ, ದೆಹೆಲಿ ಯೋಜನೆಗೆ ಸಿಕ್ಕ ಮಹತ್ವ ನಮ್ಮೂರಿನ ಯೋಜನೆಗೆ ಸಿಗಲಿಲ್ಲ.

ಅದಕ್ಕೆ ಹೇಳೋದು.. "ಪ್ರಚಾರ ಕೂಡ ಒಂದು ಕಲೆ"


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....