ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇಂದು ಮಧ್ಯಾನ್ಹ ಸುಮಾರು 3 ಗಂಟೆ ಸಮಯದಲ್ಲಿ ಮಾರುತಿ ಶಿಫ್ಟ್ ಡಿಜೈರ್ ಕಾರು ಮತ್ತು ಬೈಕ್ ನಡುವ ಜರುಗಿದ ರಸ್ತೆ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. KA13 N 7636 ನಂಬರಿನ ಶಿಫ್ಟ್ ಕಾರಿನ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡು, ಎದುರಿನಿಂದ KA13 5433 ನಂಬರಿನ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಸವಾರರಾದ ಲಿಂಗರಾಜು (55 ವರ್ಷ) ಹಾಗೂ ರವಿ (45 ವರ್ಷ) ಇಬ್ಬರೂ ತೀರ್ವವಾಗಿ ಗಾಯಗೊಂಡರು. ಇಬ್ಬರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು. ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಚಿತ್ರ ಮತ್ತು ಮಾಹಿತಿ : ಪೊಲೀಸ್ ಇಲಾಖೆ)
|
ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು |
|
ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು |
|
ಅರಸೀಕೆರೆ ತಾಲ್ಲೂಕು ಬಾಣಾವರ ಬಳಿ ರಸ್ತೆ ಅಪಘಾತ – ಇಬ್ಬರ ಸಾವು |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ