Arsikere
ಬೆಂಗಳೂರಿನ
Cadence90 ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ “ಮಾನ್ಸೂನ್
ಬೈಕಿಂಗ್” (ಹಾಸನ-ಚಿಕ್ಕಮಗಳೂರು-ಹಾಸನ) ಪ್ರಯುಕ್ತ ಇಂದು ಬೆಳಿಗ್ಗೆ 31 ಸೈಕ್ಲಿಸ್ಟ್ ಗಳು ಅರಸೀಕೆರೆ
ಪಟ್ಟಣದ ಮೂಲಕ ಸಾಗಿದರು. ಬೆಳಿಗ್ಗೆ 8.30 ರ ಸಮಯಕ್ಕೆ
ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಕೆ.ಪಿ.ಎಸ್ ರವರ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಆಗಮಿಸಿದ
ಸೈಕಲ್ ಸವಾರರು, ಅಲ್ಲಿ ಲಘು ಉಪಹಾರ ಸೇವನೆ ಮಾಡಿದರು.
16 ವರ್ಷದಿಂದ 48 ವರ್ಷದ ವಯೋಮಾನದ 31 ಜನರ ತಂಡದಲ್ಲಿ 6 ಜನ ಮಹಿಳಾ ಸೈಕಲ್ ಸವಾರರೂ ಇದ್ದರು.
50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬೆಲೆಬಾಳುವ ಹೈಬ್ರೀಡ್ ಸೈಕಲ್ ಗಳು ಈ ತಂಡದಲ್ಲಿದ್ದವು.
Cadence90 ಸಂಸ್ಥೆಯ
ಮುಖ್ಯಸ್ಥೆ ಚೇತನ್ ರಾಮ್ ರವರು ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಪ್ರತಿವರ್ಷ ಮಾನ್ಸೂನ್ ಸಮಯದಲ್ಲಿ
ಸೈಕಲ್ ಸವಾರಿಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ
ವಿಶೇಷ ತರಬೇತಿಯನ್ನು ಹೊಂದಿದ ವಿವಿಧ ವಯೋಮಾನದ ಸೈಕಲ್ ಸವಾರರು ಪಾಲ್ಗೊಳ್ಳುತ್ತಾರೆ. ಸವಾರಿಯ ಬಗ್ಗೆ ಸಂಪೂರ್ಣ ಮುಜಾಗರೂಕತಾ ಕ್ರಮಗಳನ್ನು ಕೈಗೊಂಡಿರುತ್ತೇವೆ.
ಸೂಕ್ತ ಸ್ಥಳಗಳಲ್ಲಿ ಊಟ-ಉಪಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ ಜೊತೆಯಲ್ಲಿ ವಿಶೇಷ ವಾಹನಗಳನ್ನು
ಕರೆದೊಯ್ಯಲಾಗುತ್ತದೆ. ಈ ಸಲದ ಮಾನ್ಸೂಸ್ ಸವಾರಿಯು
ಹಾಸನದಿಂದ ಪ್ರಾರಂಭವಾಗಿ ಅರಸೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಮುಖಾಂತರ ಚಿಕ್ಕಮಗಳೂರು ತಲುಪಿ,
ಅಲ್ಲಿಂದ ಬೇಲೂರು ಮುಖಾಂತರ ಹಾಸನ ತಲುಪುವಂತೆ ಆಯೋಜಿಸಲಾಗಿದ್ದು, ಇದರ ಒಟ್ಟು ದೂರ ಅಂದಾಜು 200
ಕಿಮೀ ಆಗಲಿದೆ ಎಂದು ತಿಳಿಸಿದರು. ಅರಸೀಕೆರೆಯಲ್ಲಿ
ಉಪಹಾರ ಸೇವನೆಗೆ ಸ್ಥಳಾವಕಾಶ ನೀಡಿದ ಕೆ.ಪಿ.ಎಸ್ ಪ್ರಸನ್ನ ರವರಿಗೆ ಹಾಗೂ ಉಪಹಾರದ ವ್ಯವಸ್ಥೆಗಳನ್ನು
ಮಾಡಿದ್ದ ಹೆಚ್.ರಾಮಚಂದ್ರ ರವರಿಗೆ ಧನ್ಯವಾದಗಳನ್ನು ತಿಳಿಸಿದರು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ