ಅರಸೀಕೆರೆ ತಾಲ್ಲೂಕಿನ
ಜಾಜೂರು ಸಸ್ಯಕ್ಷೇತ್ರದ ಬಳಿ ಗುರುವಾರ ಮುಂಜಾನೆ ಮೇವು ಅರಸುತ್ತಾ ಬಂದಿದ್ದ ಜಿಂಕೆಯೊಂದು ರಾಷ್ಟ್ರೀಯ
ಹೆದ್ದಾರಿ 206ನ್ನು ದಾಟುತ್ತಿದ್ದವೇಳೆ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ತೀವ್ರವಾಗಿ
ಗಾಯಗೊಂಡಿತ್ತು. ರಸ್ತೆಬದಿಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ
ಜಿಂಕೆಯನ್ನು ಕಂಡ ಸಮೀಪದ ಕೆಫೆ ಕಾಫಿ ಡೇ ಕಾರ್ಮಿಕರು ಆ ಜಿಂಕೆಗೆ
ನೀರು ಕುಡಿಸಿ ಆರೈಕೆ ಮಾಡಿ, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ತೀವ್ರವಾಗಿ
ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿತ್ತು. ಜಿಂಕೆಯ ಕಳೇಬರವನ್ನು
ಜಾಜೂರು ಸಸ್ಯಕ್ಷೇತ್ರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಚಿತ್ರಕೃಪೆ : ಪೊಲೀಸ್
ಇಲಾಖೆ
|
1 ಕಾಮೆಂಟ್(ಗಳು) :
Very sad.....
ಕಾಮೆಂಟ್ ಪೋಸ್ಟ್ ಮಾಡಿ