ಅರಸೀಕೆರೆ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ
ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೋಮವಾರದಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ, ಮಂಡಿ ಕಾರ್ಮಿಕರ ಸಂಘ, ಟೌನ್ ಲೋಡರ್ಸ್ ಯೂನಿಯನ್, ಮಜ್ದೂರ್ ಲೋಡರ್ಸ್ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಡಿ ಕಾರ್ಮಿಕರ ಸಂಘದ 44ನೇ ವರ್ಷದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು, ನಗರಸಭಾ ಅಧ್ಯಕ್ಷ ಎಂ.ಸಮೀಉಲ್ಲಾ, ಎಪಿಎಂಸಿ ಕಾರ್ಯದರ್ಶಿ ಸಿದ್ದರಾಜು, ವರ್ತಕರುಗಳು, ರೈತ ಮುಖಂಡರುಗಳು ಹಾಗೂ ಯೂನಿಯನ್ ಸದಸ್ಯರುಗಳು ಪಾಲ್ಗೊಂಡಿದ್ದರು.
(ಚಿತ್ರ : ಮಾಡಾಳು ನಂದೀಶ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ