ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ
ಅರಸೀಕೆರೆ ಗ್ರಾಮದೇವತೆ ಶ್ರೀ ಕರಿಯಮ್ಮನವರ ರಥೋತ್ಸವವು ಇಂದು ಮಧ್ಯಾನ್ಹ ಜರುಗಿತು. ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ, ಶ್ರೀ ಮಲ್ಲಿಗೆಮ್ಮದೇವಿ ಹಾಗೂ ಶ್ರೀ ಕೆಂಚರಾಯ ಸ್ವಾಮಿಯವರನ್ನು ರಥದಲ್ಲಿ ಪ್ರತಿಷ್ಟಾಪಿಸಿ, ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ನೇತೃತ್ವದಲ್ಲಿ ಭಕ್ತಾಧಿಗಳು ಜಯಘೋಷ ಮೊಳಗುತ್ತಾ ರಥವನ್ನೆಳೆದರು. ರಥೋತ್ಸವಕ್ಕೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕರಿಯಮ್ಮನವರ ದೇವಾಲಯದ ಸುತ್ತ ಮುತ್ತ ವಿವಿಧ ಸಂಘ ಸಂಸ್ಥೆಯವರು, ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದಗಳನ್ನು ವಿತರಿಸಿದರು.
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ |
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ ಮೂಲಸ್ಥಾನ |
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ |
ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರು |
ಶ್ರೀ ಮಲ್ಲಿಗೆಮ್ಮದೇವಿ |
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ |
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ