Arsikere :
ಅರಸೀಕೆರೆ ಪಟ್ಟಣದ
ರಾಷ್ಟ್ರೀಯ ಹೆದ್ದಾರಿ ಪಿ.ಪಿ.ವೃತ್ತದ ಬಳಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಭಾಗ ಇಂದು ಸಂಜೆ ಸಂಭವಿಸಿದ
ಅಪಘಾತದಲ್ಲಿ ಐವರಿಗೆ ಗಾಯಗಳಾಗಿದೆ. ಕಡೂರು ಕಡೆಯಿಂದ
ಬೆಂಗಳೂರು ಕಡೆ ಹೋಗುತ್ತಿದ್ದ KA04 MQ 7154 ನಂಬರಿನ ಹುಂಡೈ i20 ಕಾರನ್ನು ಚಾಲನೆ ಮಾಡುತ್ತಿದ್ದ
ಶಿವಕುಮಾರ್ ಎಂಬ ವ್ಯಕ್ತಿಯು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿದ್ದರ ಪರಿಣಾಮವಾಗಿ
ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ ಪಾದಚಾರಿಗಳಿಗೆ ಹಾಗೂ ನಿಲುಗಡೆ ಮಾಡಿದ್ದ ಮಾರುತಿ 800
ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ವೈ.ಬೊಮ್ಮೇನಹಳ್ಳಿ
ಪ್ರಾಥಮಿಕ ಶಾಲೆಯ ಶಿಕ್ಷಕರಾದ ಈಶ್ವರಪ್ಪ ಮತ್ತು ಸುಭಾಷ್ ನಗರದ ವಾಸಿಯಾದ ಮಂಜುನಾಥ ಎಂಬುವರಿಗೆ ತಲೆಯ
ಭಾಗಕ್ಕೆ ತೀವ್ರವಾದ ಗಾಯಗಾಳಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಿಕೊಡಲಾಗಿದೆ. ಅರಸೀಕೆರೆ ವಿವೇಕಾನಂದ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರಾದ
ಜಯಶ್ರೀ ಮತ್ತು ವೀಣಾ ಎಂಬ ಯುವತಿಯರಿಗೆ ಮತ್ತು ಬಸವರಾಜ ಪುರ ಗ್ರಾಮದ ಶಿಕ್ಷಕಿಯಾದ ಮಂಗಳಾಕುಮಾರಿ
ಎಂಬುವರಿಗೆ ಗಾಯಗಳಾಗಿದ್ದು, ಅರಸೀಕೆರೆಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಾಹನ ಚಾಲಕರನ್ನು
ದಸ್ತಗಿರಿ ಮಾಡಲಾಗಿದ್ದು, ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ