Arsikere
ಬಹು ಕುತೂಹಲ ಮೂಡಿಸಿದ್ದ
ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಆಯ್ಕೆ
ಜರುಗಿತು. ಅಧ್ಯಕ್ಷರಾಗಿ ಕಣಕಟ್ಟೆ ಕ್ಷೇತ್ರದಿಂದ
ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಕುರುವಂಕ ಕ್ಷೇತ್ರದಿಂದ
ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಧರ
ರವರು ಲಾಟರಿ ಮೂಲಕ ಆಯ್ಕೆಯಾದರು.
ಬೆಳಿಗ್ಗೆ ನಾಮಪತ್ರ
ಸಲ್ಲಿಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್
ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಂಡಿಗನಾಳು ದೇವರಾಜ್ ರವರು
ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್
ಬೆಂಬಲಿತ ಅರ್ಭ್ಯರ್ಥಿ ಕೆಲ್ಲೆಂಗೆರೆ ಕುಮಾರ್ ಮತ್ತು ಬಿಜೆಪಿ ಬೆಂಬಲಿತ ಅರ್ಭ್ಯರ್ಥಿ ಶಶಿಧರ ರವರು
ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆಯ ನಂತರ ಚುನಾವಣಾಧಿಕಾರಿಗಳಾದ ಹಾಸನ ಜಿಲ್ಲಾ ಉಪವಿಭಾಗಾಧಿಕಾರಿ
ಡಾ|| ಹೆಚ್.ಎಲ್.ನಾಗರಾಜು ರವರು ಮತದಾನಕ್ಕೆ ಆದೇಶ ನೀಡಿದರು.
16 ಸದಸ್ಯರ ಬಲಾಬಲ
ಉಳ್ಳ ಅರಸೀಕೆರೆ ಎಪಿಎಂಸಿಯಲ್ಲಿ, ಜೆಡಿಎಸ್ ಬೆಂಬಲಿತ 8 ಸದಸ್ಯರು, ಕಾಂಗ್ರೆಸ್ ಬೆಂಬಲಿತ 7 ಸದಸ್ಯರು
ಮತ್ತು ಒಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿದ್ದರು.
ಚುನಾವಣೆಯಲ್ಲಿ 8 – 8 ಸಮಬಲದ ಮತದಾನವಾದ್ದರಿಂದ, ಚುನಾವಣಾಧಿಕಾರಿಗಳು ಆಯ್ಕೆ ಪ್ರಕ್ರಿಯೆಯನ್ನು ಚೀಟಿ
ಎತ್ತುವುದರ ಮೂಲಕ ನಡೆಸುವಂತೆ ನಿರ್ದೇಶನ ನೀಡಿದರು.
ಲಾಟರಿ ಆಯ್ಕೆಯಲ್ಲಿ ಚಂದ್ರಶೇಖರ್ ರವರು ಅಧ್ಯಕ್ಷರಾಗಿ ಮತ್ತು ಶಶಿಧರ್ ರವರು ಉಪಾಧ್ಯಕ್ಷರಾಗಿ
ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ
ಚಂದ್ರಶೇಖರ್ ರವರನ್ನು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು
ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರಾದ ಎನ್.ವಿ.ನಟೇಶ್ ರವರು ಮತ್ತು
ಎಪಿಎಂಸಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಚುನಾವಣೆಯ ಪ್ರಯುಕ್ತ
ಎಪಿಎಂಸಿ ಕಚೇರಿಯ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಅರಸೀಕೆರೆ ಎಪಿಎಂಸಿ
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ್
|
ಆರಸೀಕೆರೆ ಎಪಿಎಂಸಿ
ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಧರ್
|
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ