Arsikere
ಬಹು ಕುತೂಹಲ ಮೂಡಿಸಿದ್ದ
ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಯಿತು. ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಸಂತ ಮರಿಯ ಪ್ರೌಢಶಾಲೆಯಲ್ಲಿ
ಪ್ರಾರಂಭಗೊಂಡ ಮತ ಎಣಿಕೆಯು ಮಧ್ಯಾನ್ಹ 3 ಗಂಟೆಯ ಹೊತ್ತಿಗೆ ಮುಕ್ತಾಯವಾಯಿತು.
ತಾಲ್ಲೂಕಿನ ಮಾರುಕಟ್ಟೆ
ಸಮಿತಿಯ ಒಟ್ಟು 13 ಸ್ಥಾನಗಳ ಪೈಕಿ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯು ಅವಿರೋಧವಾಗಿ
ಆಯ್ಕೆಯಾದ್ದರಿಂದ 12 ಸ್ಥಾನಗಳಿಗೆ ದಿನಾಂಕ 10-08-2017 ರಂದು ಚುನಾವಣೆ ನಡೆದಿತ್ತು.
12 ಸ್ಥಾನಗಳ ಪೈಕಿ
7 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾದರೆ, 4 ಸ್ಥಾನಗಳಲ್ಲಿ ಕಾಂಗ್ರೆಸ್
ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. 1 ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು ಪಡೆದರು.
ಚುನಾವಣೆಯ ಉಸ್ತುವಾರಿಯನ್ನು
ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಯವರು ವಹಿಸಿದ್ದರು. ಚುನಾವಣಾಧಿಕಾರಿಗಳಾಗಿ ಬಿಇಓ ನಟರಾಜ್ ರವರು
ಕಾರ್ಯ ನಿರ್ವಹಿಸಿದರು. ಅರಸೀಕೆರೆ ಪೊಲೀಸ್ ಉಪವಿಭಾಗಾಧಿಕಾರಿಗಳಾದ
ದಶರಥ ಮೂರ್ತಿ ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ
ಬಂದೋಬಸ್ತ್ ಮಾಡಲಾಗಿತ್ತು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ