ಅರಸೀಕೆರೆ ತಾಲ್ಲೂಕು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ಶಾಂತಯುತವಾಗಿ ನಡೆಯಿತು, ಆದರೆ ಮತದಾರರ
ಪ್ರತಿಕ್ರಿಯೆ ಬಹಳ ನೀರಸವಾಗಿದ್ದು ಶೇ.48.17 ರಷ್ಟು ಮತದಾನವಾಯಿತು. ಅಗ್ಗುಂದ ಕ್ಷೇತ್ರದಲ್ಲಿ ಅತಿ
ಕಡಿಮೆ ಶೇ.35.76 ಮತದಾನವಾಗಿದ್ದರೆ ಅರಸೀಕೆರೆ ವರ್ತಕರ ಕ್ಷೇತ್ರದಲ್ಲಿ ಶೇ.87.18 ಮತದಾನವಾಯಿತು.
ಒಟ್ಟು 83,486 ಮತದಾರರ ಪೈಕಿ 40,214 ಮಾತ್ರ ಮತಚಲಾಯಿಸಿದರು. 12ನೇ ತಾರೀಖು ಮತಗಳ ಎಣಿಕೆ ಕಾರ್ಯ ಜರುಗಲಿದೆ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ