Arsikere
ಅರಸೀಕೆರೆ ನಗರಸಭೆಯ
ಅಧಿಕೃತ ವೆಬ್ ಸೈಟ್ http://www.arasikerecity.mrc.gov.in/kn/Home
ಗೆ ತಾವು ಭೇಟಿ ಕೊಟ್ಟರೆ ಒಂದರ ಮೇಲೆ ಒಂದು ಅಚ್ಚರಿಯ ಮಾಹಿತಿ ದೊರೆಯುತ್ತದೆ. ಹೆಸರಿಗೆ ಅರಸೀಕೆರೆ ನಗರಸಭೆ ಎಂದಿದೆ, ಆದರೆ ಈ ವೆಬ್ ಸೈಟಿನ
ಕನ್ನಡ ಆವೃತ್ತಿಯ ಮುಖಪುಟದಲ್ಲಿ ಮಂಡ್ಯದ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಳಾಸ ಕೂಡ ಮಂಡ್ಯದ ವಿಳಾಸ
ಇದೆ. ಹುಡುಕುತ್ತ ಹೋದರೆ ಬರೀ ಅಧ್ವಾನಗಳೇ ಕಾಣುತ್ತವೆ. ವೆಬ್ ಸೈಟಿನ ಇಂಗ್ಲೀಷ್ ಆವೃತ್ತಿಯೂ ಕೂಡ
ಹೇಳಿಸಿಕೊಳ್ಳುವಂತಿಲ್ಲ. ಬಹುಶಃ ಈ ವೆಬ್ ಸೈಟನ್ನು ಕಾಟಾಚಾರಕ್ಕೆ ನಿರ್ಮಿಸಿದಂತಿದೆ.
ಅರಸೀಕೆರೆ ನಗರಸಭೆಯ
27 ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ. ದಯವಿಟ್ಟು
ನಗರಸಭೆಯ ಅಧಿಕೃತ ವೆಬ್ ಸೈಟಿನಲ್ಲಿ ಸರಿಯಾದ ಮಾಹಿತಿಗಳು ದೊರಕುವಂತೆ ಐಟಿ ವಿಭಾಗದ ಸಿಬ್ಬಂದಿಗಳಿಗೆ
ಮಾರ್ಗದರ್ಶನ ನೀಡಿ
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ