Arsikere
ಅರಸೀಕೆರೆ ತಾಲ್ಲೂಕು
ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸ್ವರ್ಣಗೌರಿ ದೇವಿಯವರ ಜಾತ್ರಾ ಮಹೋತ್ಸವವು
ದಿನಾಂಕ 24-08-2017 ರಿಂದ 02-09-2017 ರ ವರೆಗೆ ನಡೆಯಲಿದೆ.
ದಿನಾಂಕ
24-08-2017 ಗುರುವಾರದಂದು ಮಧ್ಯಾನ್ಹ 2 ಗಂಟೆಗೆ ಸ್ವರ್ಣಗೌರಿ ದೇವಿಯವರನ್ನು ಮಂಗಳ ವಾದ್ಯಗಳೊಂದಿಗೆ
ಬಾವಿಯ ಬಳಿಯಿಂದ ದೇವಸ್ಥಾನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಗುತ್ತದೆ. ದಿನಾಂಕ 02-09-2017 ರಂದು ಸಂಜೆ 6 ಗಂಟೆಗೆ ದೇವಾಲಯದ ಸಮೀಪವಿರುವ
ಕಲ್ಯಾಣಿಯಲ್ಲಿ ಅಮ್ಮನವರ ವಿಸರ್ಜನಾ ಮಹೋತ್ಸವ ನಡೆಯಲಿದೆ.
ದೇವಸ್ಥಾನದ ಮುಂಭಾಗದಲ್ಲಿರುವ
ಕರ್ಪೂರದ ಕುಂಡದಲ್ಲಿ ಇದುವರೆಗೂ ಭಕ್ತರು ಸಲ್ಲಿಸುತ್ತಿದ್ದ ಕರ್ಪೂರದ ಹರಕೆಯಿಂದ ದೇವಾಲಯದ ಸುತ್ತಮುತ್ತ
ಮಾಲಿನ್ಯ ಉಂಟಾಗುತ್ತಿತ್ತು. ಇದನ್ನು ಪರಿಹರಿಸಲು
ದೇವಸ್ಥಾನ ಮಂಡಲಿಯವರು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಹೊಗೆ ಕೊಳವೆ ಚಿಮಣಿಯನ್ನು
ಸ್ಥಾಪಿಸಿದ್ದಾರೆ. ಕರ್ಪೂರ ಕುಂಡದಲ್ಲಿ ಸಲ್ಲಿರುವ
ಹರಕೆ ಕರ್ಪೂರವು ಉರಿದು ಕೊಳೆವೆಯಲ್ಲಿ ಹೊಗೆ ಹೋಗಿ ಮಾಲಿನ್ಯವು ಸ್ವಲ್ಪ ಮಟ್ಟಿಗೆ ನಿಯಂತ್ರಣಗೊಳ್ಳಲಿದೆ.
ದೇವಸ್ಥಾನದ ಮುಂಭಾಗದಲ್ಲಿದ್ದ
ಮಣ್ಣಿನ ರಸ್ತೆಯನ್ನು ಇದೀಗ ಸಂಪೂರ್ಣವಾಗಿ ಕಾಂಕ್ರೀಟಿನಿಂದ ನಿರ್ಮಿಸಲಾಗಿದೆ ಹಾಗೂ ದೇವಸ್ಥಾನದ ಸುತ್ತಲೂ
ಬಾಕ್ಸ್ ಚರಂಡಿಯನ್ನು ಸ್ಥಳೀಯ ಪಂಚಾಯಿತಿಯ ವತಿಯಿಂದ ನಿರ್ಮಿಸಲಾಗಿದೆ. ಇದರಿಂದಾಗಿ ಭಕ್ತಾದಿಗಳಿಗೆ ಓಡಾಡಲು ಅನುಕೂಲ ಉಂಟಾಗಲಿದೆ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ