Arsikere
ಅರಸೀಕೆರೆ ಪಟ್ಟಣದ ರೀಡಿಂಗ್ ರೂಂ ರಸ್ತೆಗೆ ಇತ್ತೀಚೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮರು ನಿರ್ಮಾಣ ಮಾಡಲಾಯಿತು. ಸುಮಾರು ಒಂದು ಅಡಿ ದಪ್ಪದಷ್ಟು ಸಿಮೆಂಟ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ರಸ್ತೆ ನಿರ್ಮಾಣವು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆಯ ಬದಿಗೆ ಯಾವುದೇ ರೀತಿಯ ಪ್ಯಾಕಿಂಗ್ ನೀಡದೇ ಇರುವುದರಿಂದ, ವಾಹನ ಚಾಲನೆ ಮಾಡುವಾಗ ಅಪ್ಪಿತಪ್ಪಿ ರಸ್ತೆಯ ಬದಿಗೆ ವಾಹನ ತಂದರೆ ಅಪಘಾತ ಶತಸಿದ್ಧ.
ಇಂದು (ಬುಧವಾರ) ಇದೇ ರಸ್ತೆಯ ವೆಂಕಟೇಶ್ವರ ಕಲಾಭವನದ ಮುಂಭಾಗದಲ್ಲಿರುವ ತಿರುವಿನಲ್ಲಿ ಎರಡು ಕಾರುಗಳು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕಿಳಿದವು. ಸುತ್ತಮುತ್ತಲಿನ ಜನರ ಸಹಕಾರದಿಂದ ಕಾರನ್ನು ಮೇಲೆತ್ತಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಅರಸೀಕೆರೆ ನಗರಸಭೆಯವರು ಈ ಬಗ್ಗೆ ಸೂಕ್ತ ಗಮನ ಹರಿಸಿ, ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಅಥವಾ ಗ್ರಾವೆಲ್ ಪ್ಯಾಕಿಂಗ್ ನೀಡಿ, ವಾಹನ ಚಾಲಕರ ಸುರಕ್ಷತೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹ
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ