ಅರಸೀಕೆರೆ ತಾಲ್ಲೂಕಿನಾದ್ಯಂತ ಕಳೆದ ವರ್ಷಾಂತ್ಯದಲ್ಲಿ ಆದ ಮಳೆಯಿಂದ ಈ ಬಾರಿ ಉತ್ತಮ ಬೆಳೆ ಬಂದಿದೆ. ಸಂಕ್ರಾಂತಿಯ ಈ ಸಮಯದಲ್ಲಿ ತಾಲ್ಲೂಕಿನಾದ್ಯಂತ ಕಣಗಳಲ್ಲಿ ಬಿಡುವಿಲ್ಲದ ಕೆಲಸ ನಡೆಯುತ್ತಿದೆ.
ಫಾಸ್ಟ್ ಫುಡ್ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಯುವ ಪೀಳಿಗೆಯ ಬಹುತೇಕ ಮಕ್ಕಳಿಗೆ ಆಹಾರ ಧಾನ್ಯಗಳು ಬೆಳೆಯುವ ರೀತಿ, ಬೆಳೆದ ಪೈರನ್ನು ಧಾನ್ಯವನ್ನಾಗಿಸುವ ಪ್ರಕ್ರಿಯೆ, ಕಣ ಪದ್ಧತಿಯಲ್ಲಿ ಬಳಸುವ ಬಣವೆ, ರೋಣಗಲ್ಲು, ಉತ್ತ್ರಾಣೆಬರ್ಲು, ಧಾನ್ಯ ತೂರಲು ಬಳಸುವ ಮೊರ, ಸಗಣಿಯಿಂದ ಸಾರಿಸಿದ ಒಕ್ಕಲು ಕಣ, ಧಾನ್ಯಗಳ ರಾಶಿ ಪೂಜೆ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇರುವುದಿಲ್ಲ. ಹಾಗಾಗಿ ಇವರುಗಳಿಗೆ ತಿನ್ನುವ ಆಹಾರದ ಬಗ್ಗೆ ಗೌರವದ ಭಾವನೆ ಇರುವುದಿಲ್ಲ. ಒಂದೊಂದು ಕಾಳು ಉತ್ಪಾದನೆ ಮಾಡಲು ರೈತರು ಪಡುವ ಪರಿಶ್ರಮವನ್ನು ಹತ್ತಿರದಿಂದ ನೋಡಿದರೆ ಸಾಕು, ಅವರು ಯಾವುದೇ ವಯೋಮಾನದವರಾಗಿರಲಿ ಮುಂದೆ ತಟ್ಟೆಯಲ್ಲಿ ಆಹಾರವನ್ನು ಖಂಡಿತವಾಗಿಯೂ ಚೆಲ್ಲುವುದಿಲ್ಲ.
ಅರಸೀಕೆರೆ ಪಟ್ಟಣದಲ್ಲಿ ವಾಸಿಸುವವರು ಸಾಧ್ಯವಾದರೆ ಪಟ್ಟಣದಿಂದ ಕೇವಲ ನಾಲ್ಕೈದು ಕಿಲೋ
ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಣಗಳನ್ನು ತಮ್ಮ ಕುಟುಂಬ ಸಮೇತರಾಗಿ ನೋಡಿಕೊಂಡು
ಬನ್ನಿ, ಅರಸೀಕೆರೆ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ಹಳ್ಳಿಗಳಲ್ಲೂ ಕಣದ ಕೆಲಸ
ನಡೆಯುತ್ತಿದೆ. ಶಾಲಾ ಮುಖ್ಯಸ್ಥರೂ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕಣಕ್ಕೆ
ಕರೆದುಕೊಂಡು ಹೋಗಿ ಮಕ್ಕಳಿಗೆ ಬೇಸಾಯ ಪದ್ಧತಿ, ಆಹಾರದ ಮಹತ್ವವನ್ನು ತಿಳಿಸಿಕೊಡುವ
ಕಾರ್ಯಕ್ರಮ ಮಾಡಬಹುದು.
ನೆನಪಿರಲಿ, ಕಣ ಎನ್ನುವುದು ಅತ್ಯಂತ ಪವಿತ್ರವಾದ ಜಾಗ. ಕಣವನ್ನು ಪ್ರವೇಶಿಸುವಾಗ ಕೆಲವೊಂದು ನಿಬಂಧನೆಗಳಿವೆ, ಅವುಗಳನ್ನು ಗೌರವದಿಂದ ಪಾಲಿಸಿ.
ಕಣವನ್ನು ಪ್ರವೇಶಿಸುವಾಗ ಚಪ್ಪಲಿ ಧರಿಸಬೇಡಿ, ಕಣದಲ್ಲಿ ಧೂಮಪಾನ, ಎಲೆಅಡಿಕೆ ಮೊದಲಾದ ಪದಾರ್ಥಗಳನ್ನು ತಿನ್ನಬಾರದು, ಕಣದಲ್ಲಿ ಕೈಕಟ್ಟಿ ನಿಲ್ಲಬಾರದು ಅಲ್ಲದೇ ಮಹಿಳೆಯರು ಕೆಲವೊಂದು ಸಮಯಗಳಲ್ಲಿ ಕಣದೊಳಗೆ ಪ್ರವೇಶಿಸಬಾರದು, ಇತ್ಯಾದಿ ನಿಯಮಗಳು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಇಂದಿನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೂ ಈ ಪದ್ಧತಿಗಳು ಆಹಾರದ ಶುಚಿತ್ವಕ್ಕೆ ಅಂದಿನವರು ಅನುಸರಿಸಿದ ಕ್ರಮಗಳು ಎಂದು ತಿಳಿಯುತ್ತದೆ.
"ಕಣ ಪದ್ಧತಿ ಮುಂದಿನ ಪೀಳಿಗೆಗೆ ತಿಳಿಯಲಿ"
ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.

0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ