Arsikere
ಅರಸೀಕೆರೆ ತಾಲೋಕಿನ ಒಟ್ಟು 530 ಹಳ್ಳಿಗಳಿಗೆ ರೂ.254 ಕೋಟಿ
ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲ ಹಂತವಾಗಿ ನೀರು ಸಂಗ್ರಹಣಾ
ಟ್ಯಾಂಕ್ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು,
ಅರಸೀಕೆರೆ ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯತಿ ಬಸವನಹಟ್ಟಿ ಗ್ರಾಮದ ಬಳಿ ಶಾಸಕ ಕೆ.ಎಂ.ಶಿವಲಿಂಗೇಗೌಡ
ನೆರವೇರಿಸಿದರು. ಮುಖಂಡರಾದ ಗೀಜಿಹಳ್ಳಿ ಧರ್ಮಶೇಕರ,ಬೆಳಗುಂಬ
ಬಾಬು,ಧರ್ಮಣ್ಣ, ಇನ್ನಿತರೆ ಮುಖಂಡರು ಮತ್ತು ಗ್ರಾಮಸ್ಥರು, ಹಾಗೂ ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ಮೆಗಾ
ಕಂಪನಿಯ ಪಾಟೀಲ್ ರವರು ಹಾಜರಿದ್ದರು.
ಈ ಯೋಜನೆಯಲ್ಲಿ ತಾಲ್ಲೋಕಿನಾದ್ಯಂತ ಸೂಕ್ತ ಸ್ಥಳಗಳಲ್ಲಿ ನೀರಿನ
ಸಂಗ್ರಹಣಾ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಿ ಅವುಗಳ ಮುಖಾಂತರ ಎಲ್ಲಾ ಗ್ರಾಮಗಳಿಗೆ ಹೇಮಾವತಿ ನದಿ
ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು
ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ