Arsikere
ಅರಸೀಕೆರೆ ಮಾಲೇಕಲ್ಲು
ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಎರಡನೆಯ ದಿನವಾದ ಇಂದು (ಆಷಾಢ
ಶುದ್ಧ ಷಷ್ಠಿ, 29-06-17 ಗುರುವಾರದಂದು) ಬೆಳಿಗ್ಗೆ ಅರಸೀಕೆರೆ ಪಟ್ಟಣದ ತಾಲ್ಲೂಕು ಕಚೇರಿಯ ಖಜಾನೆಯಿಂದ
ಶ್ರೀಯವರ ರತ್ನಖಚಿತ ಆಭರಣಗಳು ಹಾಗೂ ಬೆಳ್ಳಿ ಬಂಗಾರದ ಪೂಜಾ ಸಾಮಗ್ರಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ,
ಸಾಂಪ್ರದಾಯಕ ರೀತಿಯಲ್ಲಿ ಎತ್ತಿನಗಾಡಿಯಲ್ಲಿಟ್ಟು ಮಂಗಳ ವಾದ್ಯಗಳೊಡನೆ ತಿರುಪತಿ ದೇವಾಲಯಕ್ಕೆ ತರಲಾಯಿತು.
ತಾಲ್ಲೂಕು ಆಡಳಿತದ ಹಿರಿಯ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಚೇರಿಯ ಸಿಬ್ಬಂದಿಗಳು,
ದೇವಸ್ಥಾನದ ಆಗಮಿಕರು, ಅರ್ಚಕರು, ರಥೋತ್ಸವ ಮಂಡಲಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು
ಹಾಜರಿದ್ದರು.
ಈ ದಿನ ಸಂಜೆ ಶ್ರೀಯವರ
ದೇವಾಲಯದಲ್ಲಿ ರಕ್ಷಾಬಂಧನ, ಭೇರಿತಾಡನ ದಿಗ್ಬಲಿ, ಧ್ವಜಾರೋಹಣ ಮತ್ತು ದೇವತಾ ಆಹ್ವಾನ ಸೇವೆಗಳು ಜರುಗಿದವು. ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಚಿತ್ರಗಳು : ತಿರುಪತಿ
ರಾಜ (ರಾಜಾಹುಲಿ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ