Arsikere
ತರ್ಕಕ್ಕೆ ನಿಲುಕದ ಅನೇಕ ವಿಸ್ಮಯಗಳನ್ನು ಪ್ರತಿನಿತ್ಯ ನಾವುಗಳು ನೋಡುತ್ತಿರುತ್ತೇವೆ. ಅವುಗಳಲ್ಲಿ ಕೆಲವನ್ನು ನಂಬಲೂ ಅಸಾಧ್ಯವಾಗಿರುವಂತಿರುತ್ತವೆ. ಅಂತಹುದೇ ವಿಸ್ಮಯವನ್ನು ನಮ್ಮ ಅರಸೀಕೆರೆ ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಪವಿತ್ರ ಬೆಟ್ಟದಲ್ಲಿ ಕಾಣಬಹುದು.
ಟಚ್ ಸ್ಕ್ರೀನ್ ಉಳ್ಳ ಮೊಬೈಲ್ ಫೋನಿನಲ್ಲಿರುವ ಗೂಗಲ್ ಮ್ಯಾಪ್ ಮೂಲಕ ಅಥವಾ ಕಂಪ್ಯೂಟರಿನಲ್ಲಿ ಗೂಗಲ್ ಅರ್ಥ್ ಮೂಲಕ ಯಾದಾಪುರ ಬೆಟ್ಟವನ್ನು ಒಂದು ಭಾಗದಿಂದ ನೋಡಿದರೆ ಹೃದಯದ ಆಕೃತಿಯಂತೆ ಕಾಣುತ್ತದೆ, ಮತ್ತೊಂದು ಭಾಗದಿಂದ ಜೇನುಗೂಡಿನಂತೆಯೂ ಕಾಣುತ್ತದೆ.
ಲಕ್ಷಾಂತರ ಭಕ್ತರ ಹೃದಯಲ್ಲಿ ನೆಲಸಿರುವ ಆರಾಧ್ಯದೈವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯ ಬೆಟ್ಟವು ಹೃದಯದ ಆಕಾರದಲ್ಲೇ ಕಾಣುವುದು ಒಂದು ವಿಸ್ಮಯವೇ ಸರಿ.
ನಿಮ್ಮ ಮೊಬೈಲಿನಲ್ಲಿರುವ ಗೂಗಲ್ ಮ್ಯಾಪ್ ನಿಂದ ನೀವೂ ಒಮ್ಮೆ ನೋಡಿ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ