Arsikere
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೯೩೯ನೇ ಶ್ರೀ ಹೇವಿಳಂಬಿನಾಮ ಸಂವತ್ಸರದ ಆಶಾಢ ಶುಧ್ಧ ಪಂಚಮಿ ದಿನಾಂಕ 28-06-2017ನೇ ಬುಧವಾರದಿಂದ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವವು ಪ್ರಾರಂಭವಾಗಿ ಆಶಾಢ ಬಹುಳ ಪಂಚಮಿ ದಿನಾಂಕ 14-07-2017 ನೇ ಶುಕ್ರವಾರದ ವರೆಗೆ ಜರುಗಲಿದೆ.
ಆಶಾಢ ಶುದ್ಧ ದ್ವಾದಶಿ ದಿನಾಂಕ 05-07-2017ನೇ ಬುಧವಾರದಂದು ಸುರ್ಯೋದಯಾದಿ 11.00 ರಿಂದ 12.30 ಗಂಟೆಯ ಒಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ, ವೈಖಾನಸಾಗಮ ರೀತ್ಯ, ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ "ಮಹಾ ರಥೋತ್ಸವ" ಹಾಗೂ ವಿವಿಧ ಸೇವೆಗಳನ್ನು ನಡೆಸಲು ಶ್ರೀಯವರ ಕೃಪೆಯಿಂದ ಸಂಕಲ್ಪಿಸಿರುತ್ತದೆ.
ಈ ಮಹೋತ್ಸವಗಳಿಗೆ ತಾವು ಕುಟುಂಬ ಸಮೇತರಾಗಿ ಬಂದು ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಸೇವೆ ಮಾಡಿ, ಮನೋಭೀಷ್ಠವನ್ನು ಪಡೆದು ಕೃತಾರ್ಥರಾಗಬೇಕೆಂದು ಕೋರಲಾಗಿದೆ.
ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ